ಶಿವಲಿಂಗೇಶ್ವರ 17ನೇ ಜಾತ್ರಾ ಮಹೋತ್ಸವ 26ರಿಂದ

Published on

ಗೋಕಾಕ: ಇಲ್ಲಿನ ವಿವೇಕಾನಂದ ನಗರದಲ್ಲಿ ಫೆ.26 ರಿಂದ 27ರ ವರೆಗೆ ಶ್ರೀ ಶಿವಲಿಂಗೇಶ್ವರ 17ನೇ ಜಾತ್ರಾ ಮಹೋತ್ಸವ ಜರುಗಲಿದೆ.ಫೆ.26ರಂದು ಬೆಳಗ್ಗೆ ರುದ್ರಾಭಿಷೇಕ, ಸುಮಂಗಲೆಯರ ಆರತಿ ನೆರವೇರಲಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಸರ್ಧೆ ಏರ್ಪಡಿಸಲಾಗಿದೆ. ಸಂಜೆ ದೀಪೋತ್ಸವ, ಉಡಿ ತುಂಬುವ ಕಾರ್ಯ, ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ತಂಡದ ಮಕ್ಕಳಿಂದ ಜಾನಪದ ಗಾಯನ ಹಾಗೂ ನೃತ್ಯ ಸ್ಪರ್ಧೆ ನಡೆಯಲಿವೆ.

ಫೆ.27ರಂದು ಬೆಳಗ್ಗೆ 11ಗಂಟೆಗೆ ಧಾರ್ಮಿಕ ಸಭೆ ಜರುಗಲಿದೆ. ಶೂನ್ಯ ಸಂಪಾದನ ಮಠದ ಮುರುರಾಜೇಂದ್ರ ಸ್ವಾಮೀಜಿ, ಹುಲಿಕಟ್ಟಿಯ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿಪ ಸದಸ್ಯ ಲಖನ ಜಾರಕಿಹೊಳಿ ಸೇರಿ ಅನೇಕ ಗಣ್ಯರು, ನಗರಸಭೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ಅಧ್ಯ ಜೆ.ಎಂ.ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net