ಬದುಕಿನ ಮೌಲ್ಯ ಸಾರಿದ ಶಿವಕುಮಾರಶ್ರೀಗಳು

02 04 2025_BGR_RURAL_PAGE_3
ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಆಯೋಜಿಸಿದ್ದ ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 118 ನೇ ಜಯಂತಿಯನ್ನು ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಇತರರು ಇದ್ದರು.
Published on

ನೆಲಮಂಗಲ: ಜೀವನ ಕೊಡುವುದು ಜಗತ್ತಿನ ಸಹಜ ಧರ್ಮ. ಆದರೆ, ಎಷ್ಟೋ ಜೀವಗಳಿಗೆ ಬದುಕಿನ ಮೌಲ್ಯಗಳ ಜತೆಗೆ ಜಗತ್ತಿಗೆ ಬೆಳಕು ನೀಡುವ ಮಹತ್ವದ ಕಾರ್ಯವನ್ನು ಶ್ರೀ ಶಿವಕುಮಾರಸ್ವಾಮೀಜಿ ಅವರು ಮಾಡಿ ಮಹಾನ್​ ಜಂಗಮರಾಗಿದ್ದಾರೆ ಎಂದು ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ್​ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ನಗರದ ಪವಾಡ ಶ್ರೀ ಬಸವಣ್ಣದೇವರ ಮಠದ ಆವರಣದಲ್ಲಿ ಮಂಗಳವಾರ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ವರ್ಗ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪೂಜ್ಯರು ಸಹಜವಾಗಿ ಸಾಕಷ್ಟು ಅಪಮಾನ, ಅವಮಾನಗಳನ್ನು ಎದುರಿಸಿದ್ದೂ ಉಂಟು. ಆದರೂ, ಮಕ್ಕಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಜತೆಗೆ ಕಲಿಯುಗದಲ್ಲಿ ದೇವರಿಲ್ಲ, ವ್ಯಕ್ತಿ ಮಾಡಿದ್ದ ಸೇವೆಯಿಂದ ಮಾತ್ರ ದೇವರಾಗಲು ಸಾಧ್ಯ ಎಂಬುದನ್ನು ಸ್ವಾಮೀಜಿ ವಿಶ್ವಕ್ಕೆ ಸಾರಿದ್ದಾರೆ. ಅಂತಹ ಮಹಾನ್​ ವ್ಯಕ್ತಿಯ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.

ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ತಮ್ಮ ಬದುಕನ್ನು ಬಡಮಕ್ಕಳ ಶ್ರೇಯೋಭಿವೃದ್ದಿಗಾಗಿ ಮೀಸಲಿಟ್ಟ ಮಹಾಮಾನವತಾವಾದಿ ಶ್ರೀ ಶಿವಕುಮಾರ ಸ್ವಾಮೀಜಿ. ಅವರ ನಡೆ, ನುಡಿ ಪ್ರತಿಯೊಬ್ಬರಿಗೆ ಮಾರ್ಗದರ್ಶನವಾಗಿದೆ. ನಮ್ಮೆಲ್ಲರನ್ನೂ ಭಾವನಾತ್ಮಕವಾಗಿ ಜೀವಂತವಾಗಿಡುವ ಆದರ್ಶ ಮೌಲ್ಯಗಳನ್ನು ಮೈಗೂಡಿಸಿಕೊಂಡವರು ಶ್ರೀಗಳು. ಅವರು ಇಂದು ಭೌತಿಕವಾಗಿ ಅಗಲಿದ್ದರೂ ಸಮಾಜದಲ್ಲಿ ಅವರ ಸೇವೆ ಸರ್ವಕಾಲಕ್ಕೂ ಸಾರ್ಥಕ ಎನಿಸಿದೆ ಎಂದರು.

ನಗರಸಭೆ ನಿಕಟಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಲೋಲಾ ಗಂಗಾಧರ್​, ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂದ ಅಧ್ಯಕ್ಷ ನಾಗರಾಜ್​, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅದ್ಯೆ ಮಂಜುಳಾ ಸುರೇಶ್​, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ್​, ಮಹಿಳಾ ಟಕ ಅಧ್ಯೆ ವೇದಾವತಿ, ಜಿಲ್ಲಾ ನಿರ್ದೇಶಕಿ ರಾಜಮ್ಮಪ್ರಕಾಶ್​, ಸಾಹಿತಿ ಬಾಲಚಂದ್ರ, ಆಸ್ಪತ್ರೆ ವೈದ್ಯ ಡಾ.ಆನಂದ್​, ಡಾ.ಕವಿತಾ, ಡಾ.ವಿಶಾಲ್​, ಮುಖಂಡ ಪಣ್ಮುಖಪ್ಪ, ಗಿರೀಶ್​, ಪುನೀತ್​ರಾಜ್​, ಗಂಗಾಧರ್​, ಪ್ರಕಾಶ್​, ಶಿವಕುಮಾರ್​, ಹರೀಶ್​, ನಾಗರಾಜ್​ ಇದ್ದರು.

ಪುಸ್ತಕ ಲೋಕಾರ್ಪಣೆ, ಆರೋಗ್ಯ ಶಿಬಿರ : ಕಾರ್ಯಕ್ರಮದಲ್ಲಿ ಸಾಹಿತಿ ಬಾಲಚಂದ್ರ ರಚಿತ ಅಮರ ಸಂದೇಶಗಳು ಭಾಗ&1, ನುಡಿ ಸಂದೇಶಗಳು ಭಾಗ &2, ದಿವ್ಯ ಸಂದೇಶಗಳು ಭಾಗ& 3 ಸೇರಿದಂತೆ ಶ್ರೀ ಶಿವಕುಮಾರ ಎಂಬ 4 ಕೃತಿ ಲೋಕಾರ್ಪಣೆ ಮಾಡಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನದ ಹಿನ್ನೆಲೆ ಶ್ರೀ ಬಸವಣ್ಣ ದೇವರ ಮಠ, ವೀರಶೈವ ಲಿಂಗಾಯತ ನಿವೃತ್ತ ನೌಕರರ ೇಮಾಭಿವೃದ್ಧಿ ಸಂ ಹಾಗೂ ಆಸ್ಟರ್​ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. 10ಕ್ಕೂ ಹೆಚ್ಚು ಬಗೆಯ ರೋಗ ಲಕ್ಷಣಗಳ ಕುರಿತಂತೆ ತಜ್ಞ ವೈದ್ಯರು ತಪಾಸಣೆ ನಡೆಸಿದರು.

ವಿವಿಧೆಡೆ ಆಚರಣೆ : ನಗರದ ವಿವಿಧ ವಿದ್ಯಾಸಂಸ್ಥೆಗಳು, ವೀರಶೈವ ಲಿಂಗಾಯತ ಸಂಟನೆಗಳು ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಿದ್ಧಗಂಗೆಯ ಶತಾಯುಷಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net