ನಡೆದಾಡುವ ದೇವರು ಎಲ್ಲ ಕಾಲಕ್ಕೂ ಪ್ರಸ್ತುತ: ಅಲಯನ್ಸ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿಕೆ

Shivakumara Mahaswamiji Jayanti Celebration Mandya
Published on

ಮಂಡ್ಯ: ಅಸಂಖ್ಯಾತ ಬಡಮಕ್ಕಳಿಗೆ ಬದುಕು ರೂಪಿಸಿದ ಮಹಾನ್ ಶಿಲ್ಪಿ ನಡೆದಾಡುವ ದೇವರಾಗಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿ ಭಕ್ತರ ಮನದಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ಅಲಯನ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಬಣ್ಣಿಸಿದರು.

ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಶುಗರ್ ಸಿಟಿ ಅಲಯನ್ಸ್ ಕ್ಲಬ್, ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ವತಿಯಿಂದ ಶಿವಕುಮಾರ ಮಹಾಸ್ವಾಮೀಜಿ 118ನೇ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ವಿದ್ಯೆ, ದಾಸೋಹ ಹಾಗೂ ವಸತಿ ನೀಡಿ ದೇವರಾಗಿದ್ದ ಶಿವಕುಮಾರ ಮಹಾಸ್ವಾಮೀಜಿ ಅವರು ತ್ರಿವಿದ ದಾಸೋಹಿ ಎಂಬ ಬಿರುದು ಪಡೆದು ಭಕ್ತರ ಮನದಲ್ಲಿ ದೇವರಾಗಿ ಕುಳಿತರು. ಆರಂಭದಲ್ಲಿ ಶ್ರೀಮಠದಲ್ಲಿ ಕೇವಲ ಬೆರಳಣಿಕೆಯಷ್ಟು ಮಕ್ಕಳಿದ್ದರು. ನಂತರ ಲಕ್ಷಾಂತರ ಮಕ್ಕಳು ವಿದ್ಯಾರ್ಜನೆ ಮಾಡಲು ಸಹಕಾರಿಯಾಗಿದ್ದರು. ಇವರ ಸೇವೆ ಇಂದಿಗೂ ಅನನ್ಯ ಎಂದು ಸ್ಮರಿಸಿದರು.

ನಡೆದಾಡುವ ದೇವರಾಗಿ ಸರಳ ಜೀವನ ನಡೆಸಿದ ಸ್ವಾಮೀಜಿ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಇವರ ಜನ್ಮದಿನವನ್ನು ವಿಜೃಂಭಣೆಯಿಂದ ಎಲ್ಲ ಕಡೆಯೂ ಆಚರಿಸಲಾಗುತ್ತಿದೆ. ಎಂಟು ದಶಕಗಳ ಕಾಲ ಮಠದಲ್ಲಿ ಮಠಾಧೀಶರಾಗಿ ಅನನ್ಯ ಸೇವೆ ಸಲ್ಲಿಸಿದ ಮಹಾಸ್ವಾಮೀಜಿ, ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ಶ್ಲಾಘಿಸಿದರು.

ಶುಗರ್ ಸಿಟಿ ಅಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ನಾಗರಾಜು, ಸೇವಾ ಕಿರಣ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ವಿ.ನಾಗರಾಜು, ಲಯನ್ಸ್ ರಕ್ಷಿತ್ ರಾಜ್, ಎಸ್.ಎಂ.ಲೋಕೇಶ್, ಶಿವಪ್ರಸಾದ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಡೇವಿಡ್, ಭವಾನಿ ಲೋಕೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net