ಡಾ.ಶಿವಕುಮಾರ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮ

29GDG02
Published on

ಗದಗ: ಸಿದ್ಧಾರೂಢರ ತತ್ವ, ಚಿಂತನೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.
ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸದ್ಗುರು ಡಾ.ಶಿವಕುಮಾರ ಸ್ವಾಮೀಜಿ ೮೦ನೇ ಜಯಂತಿ ಮಹಾಮಹೋತ್ಸವದ ಪ್ರಯುಕ್ತ ಡಾ.ಶಿವಕುಮಾರ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮ ಹಾಗೂ ಸಿದ್ಧಾರೂಢ ನಗರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ. ಮಾನವ ಜನ್ಮವನ್ನು ವ್ಯರ್ಥ ಕಾಲ ಹರಣದಲ್ಲಿ ಕಳೆಯದೇ ನಿತ್ಯ, ಜಪ, ತಪ, ದಾನ, ಧರ್ಮ, ದಾಸೋಹ, ಆಧ್ಯತ್ಮ ಚಿಂತನೆಗಳ ಮೂಲಕ ಭಗವಂತನ ಕೃಪಗೆ ಪಾತ್ರರಾಗಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಜನರಲ್ಲಿ ಒಡಕು ಮೂಡುವ ಕೆಲಸವನ್ನು ಮಾಡುತ್ತಾರೆ. ಆದರೆ ಗ್ರಾಮೀಣ ಭಾಗದ ಜನರು ರಾಜಕೀಯ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಚಾರ ಮಾಡಬೇಕು. ಅದನ್ನು ಗ್ರಾಮದಲ್ಲಿ ಚಿಂತನೆ ಮಾಡಬಾರದು. ಗ್ರಾಮಗಳು ಅಭಿವೃದ್ಧಿಯಾಗಲು ಗ್ರಾಮೀಣ ಭಾಗದಲ್ಲಿ ಒಗ್ಗಟ್ಟು ಹಾಗೂ ಹೊಂದಾಣಿಕೆ ಅಗತ್ಯವಾಗಿದೆ. ಗ್ರಾಮಗಳಲ್ಲಿ ಎಲ್ಲರೂ ಒಂದುಗೂಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿAಗ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಮೇಲಿಂದ ಮೇಲೆ ನಡೆಯುತ್ತಿರಬೇಕು. ಇಂದಿನ ಒತ್ತಡದ ಜೀವನದಲ್ಲಿ ಧಾರ್ಮಿಕ ಚಿಂತನೆ ಕಡಿಮೆಯಾಗುತ್ತಿದೆ. ಆದರಿಂದ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬೀದರ ಚಿದಂಬರ ಆಶ್ರಮದ ಸಿದ್ಧರೂಢ ಮಠದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ತತ್ವಗಳನ್ನು ಪಾಲನೆ ಮಾಡುವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಲ್ಲಾಪೂರ ಗ್ರಾಮದ ಸಿದ್ಧಾರೂಠ ನಗರವನ್ನು ಉದ್ಘಾಟನೆ ಮಾಡಲಾಯಿತು. ಪತ್ರಕರ್ತರಾದ ರವಿಕುಮಾರ ಉಳ್ಳಾಗಡ್ಡಿ, ರುದ್ರಗೌಡ ಪಾಟೀಲರನ್ನು ಸನ್ಮಾನಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೀದರ ಸಿದ್ಧಾರೂಢ ಆಶ್ರಮದ ಸಂಗೀತ ತಾಯಿಯವರು, ಗುರುಮಲ್ಲಯ್ಯಸ್ವಾಮೀಜಿ, ಬಸಯ್ಯ ಶಾಸ್ತಿçÃಗಳು ಭಿಕ್ಷಾವತಿಮಠ, ಶಂಕ್ರಯ್ಯ ಹಿರೇಮಠ, ಅಶೋಕ ಸತ್ತಿಗೇರಿ, ಡಾ.ವೀರೇಶ ಸತ್ತಿಗೇರಿ, ಅಶೋಕ ಸತ್ತಿಗೇರಿ, ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಮಹಾದೇವಗೌಡ ಪಾಟೀಲ, ಮಲ್ಲಪ್ಪ ಚಳಗೇರಿ, ರಮೇಶ ಹೂಗಾರ, ಸಂಗಪ್ಪ ಗಾರವಾಡ, ವಿಠ್ಠಲ ಸುಂಕದ, ಸಂಗಪ್ಪ ಗಾರವಾಡ ಸೇರಿದಂತೆ ಇತತರು ಇದ್ದರು.

ಡಾ.ಶಿವಕುಮಾರ ಸ್ವಾಮೀಜಿ ತುಲಭಾರ
ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ೮೦ನೇ ಜಯಂತಿ ಮಹಾಮಹೋತ್ಸವದ ಪ್ರಯುಕ್ತ ಡಾ.ಶಿವಕುಮಾರ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮ ನಡೆಯಿತು. ಮಲ್ಲಾಪೂರ, ಸಂದಿಗವಾಡ, ಚಿಕ್ಕಮಣ್ಣೂರು, ಅರಹುಣಸಿ, ಬೆಳವಣಕಿ, ಸ್ವ ಸಾಹಯ ಸಂಘದ ಸದಸ್ಯರಿಂದ ತುಲಭಾರ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net