

ಸಿರಗುಪ್ಪ: ಕನ್ನಡಿಗರೆಲ್ಲರೂ ಸೇರಿ ಕನ್ನಡ ಮಂಟಪಗಳನ್ನು ನಿರ್ಮಾಣಿಸಿಕೊಂಡು ಪ್ರತಿವಾರಕ್ಕೊಮ್ಮೆ ಸೇರಿಕೊಂಡು ಕನ್ನಡದ ಉತ್ತಮ ಗ್ರಂಥಗಳನ್ನು ಅಧ್ಯಯನ ಮತ್ತು ವಿಮರ್ಶೆ ಮಾಡಿದಲ್ಲಿ ಕನ್ನಡ ಉಳಿಯತ್ತದೆ ಎಂದು ಸಮ್ಮೇಳನಾಧ್ಯಕ್ಷ ಶಿವಕುಮಾರ ಎಸ್.ಬಳಿಗಾರ ಹೇಳಿದರು.
ಪಟ್ಟಣದ ಅಭಯಾಂಜನೇಯ ದೇವಸ್ಥಾನದ ಮುಂಭಾಗ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 7ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತಾ ವಿದ್ವಾಂಸ ದೊಡ್ಡಬಸವವಾರ್ಯ ಗವಾಯಿಗಳ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಡಿನಾಡಿನ ಕನ್ನಡಿಗರು ಕಷ್ಟಪಟ್ಟು ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದಾರೆ. ಅವರು ಅನುಭವಿಸುವಂತಹ ಸಮಸ್ಯೆಗಳನ್ನು ಅರಿತು ರಕ್ಷಣೆ ನೀಡುವಂತಹ ಕೆಲಸವಾಗಬೇಕು. ವೈಚಾರಿಕ ವೈಜ್ಞಾನಿಕ ನೆಲೆಯಲ್ಲಿ ಭಾಷೆಯ ಎಲ್ಲ ವಿಚಾರಗಳ ಸೊಬಗನ್ನು ಅರಿತುಕೊಂಡು ಮುಂದಿನ ಪೀಳಿಗೆಗೆ ಸಾಹಿತ್ಯದ ಅಭಿರುಚಿಯನ್ನು ತಿಳಿಸಬೇಕೆಂದರು.
ರಾಷ್ಟ್ರಧ್ವಜ ತಹಸೀಲ್ದಾರ್ ಎಚ್.ವಿಶ್ವನಾಥ, ನಾಡಧ್ವಜ ನಗರಸಭೆ ಅಧ್ಯಕ್ಷೆ ರೇಣುಕಮ್ಮ ವೆಂಕಟೇಶ, ಸಾಹಿತ್ಯ ಪರಿಷತ್ ಧ್ವಜವನ್ನು ಕಸಾಪ ತಾಲೂಕು ಅಧ್ಯಕ್ಷ ಡಾ.ಮಧುಸೂಧನ ಕಾರಿಗನೂರು ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಪ್ಯಾಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷ ಶಿವಕುಮಾರ ಎಸ್.ಬಳಿಗಾರ ಅವರನ್ನು ಇಲ್ಲಿನ ರಾಜಬೀದಿಗಳಲ್ಲಿ ಸಕಲ ವಾದ್ಯಮೇಳ ಹಾಗೂ ಕಲಾತಂಡಗಳೊಂದಿಗೆ ವೇದಿಕೆಯ ಮಹಾದ್ವಾರದವರೆಗೆ ಮೆರವಣಿಗೆ ನಡೆಯಿತು.
ಕಸಾಪ ತಾಲೂಕು ಅಧ್ಯಕ್ಷ ಡಾ.ಮಧುಸೂಧನ ಕಾರಿಗನೂರು ಸಾಹಿತ್ಯ ಸಮ್ಮೇಳನದ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿರುದ್ರಪ್ಪ ಆಶಯ ನುಡಿಗಳನ್ನು ನುಡಿದರು.
ಸಾಹಿತ್ಯ ಪರಿಷತ್ ಸ್ಮರಣ ಸಂಚಿಕೆಯನ್ನು ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ಡಾ.ನಾ.ಸೋಮೇಶ್ವರ ಬಿಡುಗಡೆಗೊಳಿಸಿದರು. ಕಸಾಪ ಮಾಜಿ ತಾಲೂಕು ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ, ಸರಕಾರಿ ಪ್ರಥಮ ದರ್ಜೆ ಕಾಲೇಜ ಉಪನ್ಯಾಸ ಕೆ.ಎಂ.ಗಾದಿಲಿಂಗಪ್ಪ, ದೇವದುರ್ಗ ಕನ್ನಡ ಸಾಹಿತ್ಯಕ್ಕೆ ಸಿರಗುಪ್ಪ ತಾಲೂಕಿನ ಕೊಡುಗೆ, ನಾಗರಹಾಳು ನಾ.ಮ.ಮರುಳಾರಾಧ್ಯ ಅವರು ಜಾನಪದ ಸಾಹಿತ್ಯದ ಸೊಬಗು, ಪೊಲೀಸ್ ಇಲಾಖೆಯ ತೆಕ್ಕಲಕೋಟೆ ಬಿ.ಚಂದ್ರಶೇಖರ ಅವರು ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ವಿಚಾರಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದರು.
ತಾಪಂ ಇಒ ಪವನುಕುಮಾರ್, ಸಿಪಿಐ ಹನುಮಂತಪ್ಪ, ಬಿಇಒ ಗುರಪ್ಪ, ಬಿಆರ್‌ಸಿ ತಮ್ಮನಗೌಡ ಪಾಟೇಲ್, ಟಿಎಚ್‌ಒ ಡಾ.ದಮ್ಮೂರು ಬಸವರಾಜ, ಬಿಸಿಎಂ ಅಧಿಕಾರಿ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಸಿದ್ದಯ್ಯ, ವಾಲ್ಮೀಕಿ ನಾಯಕ ವಿದ್ಯಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಸತೀಶ್, ಸಮಾಜ ಸೇವಕ ಧರಪ್ಪನಾಯಕ, ಎಪಿಎಂಸಿ ಮಾಜಿ ಸದಸ್ಯ ನರೇಂದ್ರಸಿಂಹ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಹುಚ್ಚಿರಪ್ಪ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಜಿ.ವೆಂಕಟಪ್ಪ, ನಾ.ಮ.ಬಸವರಾಜಯ್ಯ, ಸಿರಿಗೇರಿ ಪನ್ನರಾಜು, ಬೀರಳ್ಳಿ ರಾಮರೆಡ್ಡಿ, ಕುಡುದಹಾಳು ಶಿವಕುಮಾರ ತಾತ, ನಾ.ಮ.ಬಸವರಾಜಯ್ಯ, ಜಿ.ವೆಂಕಟಪ್ಪ, ಶಾಬಾದಿ ವೀರೇಶ, ಹನುಮಂತರೆಡ್ಡಿ, ದಮ್ಮೂರು ಮಲ್ಲಿಕಾರ್ಜುನ, ಪಂಪಾಪತಿ, ಸೇರಿ ಪರಿಷತ್ ಪದಾಧಿಕಾರಿಗಳು ಹಾಗೂ ನಗರ ಮತ್ತು ತಾಲೂಕಿನ ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.