ಲಿಂ.ಶಿವಕಾಂತ ಸಿದ್ನಾಳ ಪ್ರಥಮ ಪುಣ್ಯಸ್ಮರಣೆ

25BGV_Manju1
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಉತ್ತರ ಕರ್ನಾಟಕ ಭಾಗದಲ್ಲಿ ಹೈನೋದ್ಯಮ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ನವೋದ್ಯಮಿ ಶಿವಕಾಂತ ಎಸ್.ಸಿದ್ನಾಳ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ಮಂಗಳವಾರ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುರಗುಂದ (ನೇಗಿನಹಾಳ) ಗ್ರಾಮದ ಬಳಿ ಇರುವ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಆವರಣದಲ್ಲಿ ಜರುಗಿತು.

ಶಿವಕಾಂತ ಎಸ್.ಸಿದ್ನಾಳ ಅವರ ಪುತ್ಥಳಿ ಅನಾವರಣವನ್ನು ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಸಿದ್ನಾಳ, ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಸೇರಿ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ಶಾಸಕರಾದ ಅಭಯ ಪಾಟೀಲ, ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಮಾಜಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ಹಿರಿಯ ನಾಯಕ ಶಂಕರಗೌಡ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಡಾ.ಪ್ರೀತಿ ಕೋರೆ, ಉದ್ಯಮಿ ಫೈಜಾನ್ ಸೇಠ್, ಬೆಲ್ಲದಬಾಗೇವಾಡಿ ಅರ್ಬನ್ ಕೋ-ಆ್ ಸೊಸೈಟಿ ಅಧ್ಯಕ್ಷ ಪವನ ಕತ್ತಿ, ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಮಾಜಿ ಮೇಯರ್ ವಿಜಯ ಮೋರೆ ವಿವಿಧ ಕ್ಷೇತ್ರಗಳಲ್ಲಿನ ಉದ್ಯಮಿ, ಗಣ್ಯರು ಆಗಮಿಸಿ ಗೌರವ ಸಲ್ಲಿಸಿದರು.

ಬೆಳಗಾವಿ ನಗರ, ರಾಮದುರ್ಗ, ಗೋಕಾಕ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು, ಹೈನುಗಾರರು, ಕೃಷಿ ಕಾರ್ಮಿಕರು, ವಾಹನ ಚಾಲಕರು, ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಏಜೆಂಟರು, ನೌಕರರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿ ನಮನ ಸಲ್ಲಿಸಿದರು.

ಜನ ಮನ್ನಣೆ ಪಡೆದ ವಿಜಯಕಾಂತ ಡೇರಿ ಉತ್ಪನ್ನಗಳು

ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದಲ್ಲಿ 18 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಲಿಂ.ಶಿವಕಾಂತ ಎಸ್.ಸಿದ್ನಾಳ ಅವರ ಕನಸಿನ ಕೂಸಾಗಿರುವ ವಿಜಯಕಾಂತ ಡೇರಿ ಹೈನೋದ್ಯಮ ಕ್ಷೇತ್ರ ಹಾಗೂ ಹಾಲಿನ ಉತ್ಪನ್ನಗಳ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದೆ. ಸಾವಿರಾರು ಜನರಿಗೆ ಉದ್ಯೋಗಾವಕಾಶ ಒದಗಿಸಿದೆ. ನೂರಾರು ಹಳ್ಳಿಗಳಲ್ಲಿ ವಿಜಯಕಾಂತ ಡೇರಿ ಮೇಲೆ ಸಾವಿರಾರೂ ಕುಟುಂಬಗಳು ಅವಲಂಬಿತವಾಗಿವೆ. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ನಿತ್ಯ ಅಂದಾಜು 1.70 ಲಕ್ಷ ಹಾಲು ಶೇಖರಣೆ ಆಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ವಿವಿಧ ರಾಜ್ಯಗಳಿಗೆ ನಿತ್ಯ ಲಕ್ಷಾಂತರ ಲೀಟರ್ ಹಾಲು ಮಾರಾಟ ಮಾಡುತ್ತಿದೆ. 300 ಮಾದರಿಯ ಹಾಲಿನ ಉತ್ಪನ್ನ, ಕಿಂಗ್ ಐಸ್‌ಕ್ರೀಂ ಮಾರಾಟ ಮಾಡುವ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net