ರಾಷ್ಟç ನಿರ್ಮಾಣಕ್ಕೆ ಶಿವಾಜಿ ಕೊಡುಗೆ ಅಪಾರ

20sor2
ಮೂಡದೀವಳಿಗೆ ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದಿಂದ ಛತ್ರಪತಿ ಶಿವಾಜಿ ಜಯಂತಿ ಆಚರಿಸಲಾಯಿತು. ಲೋಕೇಶ್, ರವಿ, ಶಿವಾಜಿ, ಸುರೇಶಪ್ಪ, ಲೋಕೇಶ್, ಗುತ್ಯಪ್ಪ ಇತರರಿದ್ದರು.
Published on

ಸೊರಬ: ಭಾರತವನ್ನು ಒಗ್ಗೂಡಿಸಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದವರಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಪಾತ್ರ ಮಹತ್ವದ್ದು ಎಂದು ಮೂಡದೀವಳಿಗೆ ಗ್ರಾಮದ ಲೋಕೇಶ್ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿಯ ಮೂಡದೀವಳಿಗೆ ಗ್ರಾಮದಲ್ಲಿ ಭಾನುವಾರ ಕ್ಷತ್ರಿಯ ಮರಾಠ ಸಮಾಜದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ರಾಜನಾಗಿರದೆ, ಧೈರ್ಯ, ಶೌರ್ಯದ ಸಂಕೇತವಾಗಿದ್ದರು ಎಂದು ತಿಳಿಸಿದರು.
ಬಳ್ಳಿಬೈಲು ಗ್ರಾಮದಿಂದ ಮೂಡದೀವಳಿಗೆ, ಚನ್ನಪಟ್ಟಣ ಮಾರ್ಗವಾಗಿ ಚಂದ್ರಗುತ್ತಿ ಮುಖ್ಯರಸ್ತೆ, ರಥಬೀದಿ ಸೇರಿ ಕಮಲಾಪುರ ಗ್ರಾಮದವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಕ್ಷತ್ರಿಯ ಮರಾಠ ಸಮಾಜದ ರವಿ, ಶಿವಾಜಿ, ಸುರೇಶಪ್ಪ, ಲೋಕೇಶ್, ಗುತ್ಯಪ್ಪ, ಮಂಜುನಾಥ, ಚಂದ್ರು, ರವಿ, ವೀರಭದ್ರಪ್ಪ, ಪರಸಪ್ಪ, ಪರಶುರಾಮ, ಎಂ.ಕೆ.ಸಚಿನ್ ಕಮಲಾಪುರ, ರಾಜು, ವಿಜಯಕುಮಾರು, ಪ್ರೇಮ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net