ಶಿವಾಜಿ ದಕ್ಷ ಸೇನಾಧಿಪತಿ, ಶಾಸಕ ಬಣಕಾರ ಬಣ್ಣನೆ

20 HKR 02- SHIVAJI BANAKAR
Published on

ಹಿರೇಕೆರೂರ: ಛತ್ರಪತಿ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿಯಿಂದ ಸಂಸ್ಕಾರಗೊಂಡು, ಬಾಲ್ಯದಿಂದಲೇ ತಮ್ಮ ಪರಾಕ್ರಮ ರೂಪಿಸಿಕೊಂಡು ದಕ್ಷ ಸೇನಾಧಿಪತಿಯಾಗಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದರು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಮಾಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಹೋರಾಟ ಹಾಗೂ ಮಾತೃಭೂಮಿಯ ಬಗೆಗಿನ ಅಪಾರ ಭಕ್ತಿ ಮತ್ತು ಜನಪರ ಕಾಳಜಿ ಎಲ್ಲ ಕಾಲಕ್ಕೂ ಸ್ಮರಣೀಯವಾಗಿದೆ ಎಂದರು.

ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮೇಘರಾಜ ಮಾಳಗಿಮನಿ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯ ಹರೀಶ ಕಲಾಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷ ರಮೇಶ ಮಡಿವಾಳರ, ಮರಾಠಾ ಸಮಾಜದ ಅಧ್ಯಕ್ಷ ಮಾಲತೇಶ ಶಿಂಧೆ, ಜ್ಯೋತಿಭಾ ಜಾಧವ್, ವೆಂಕಟೇಶ ಡಾಂಗೆ, ಮಾರುತಿ ಮಧೂರಕರ, ರಾಜು ಖಾಂಡ್ಕೆ, ಹನುಮಂತ ಡಾಂಗೆ, ಕಿರಣ್ ಕೊಲ್ಲಾಪುರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net