ಗೆರಿಲ್ಲಾ ಯುದ್ಧದ ಪ್ರವರ್ತಕ ಶಿವಾಜಿ

ಹನೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು. ಮಹದೇವ, ನಾಗೇಂದ್ರ, ಮಹದೇವನಾಯ್ಕ, ಶೇಷಣ್ಣ, ಜಯಂತ್‌ರಾವ್, ಕಾವ್ಯ ಇತರರು ಇದ್ದರು.
ಹನೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು. ಮಹದೇವ, ನಾಗೇಂದ್ರ, ಮಹದೇವನಾಯ್ಕ, ಶೇಷಣ್ಣ, ಜಯಂತ್‌ರಾವ್, ಕಾವ್ಯ ಇತರರು ಇದ್ದರು.
Published on

 ಹನೂರು: ಯುದ್ಧ ನೀತಿಗಳನ್ನು ಕರಗತ ಮಾಡಿಕೊಳ್ಳುವುದರ ಮೂಲಕ ಸ್ವಾಭಿಮಾನದ ರಾಷ್ಟ್ರ ನಿರ್ಮಿಸುವಲ್ಲಿ ಛತ್ರಪತಿ ಶಿವಾಜಿ ಅವರ ಪಾತ್ರ ಅಪಾರ ಎಂದು ಅರ್ಚಕ ಜಯಂತ್‌ರಾವ್ ಸಿಂಧೆ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮರಾಠ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು ಯುದ್ಧ ಕೌಶಲ, ಶೌರ್ಯ ಹಾಗೂ ಉತ್ತಮ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದರು. ಬಾಲ್ಯದಲ್ಲಿಯೇ ವೀರರ ಕಥೆಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಧೈರ್ಯವನ್ನು ಹೊಂದಿದ್ದರು. ಇವರು ಮೊದಲು ಮೊಘಲರ ವಿರುದ್ಧ ಯುದ್ಧ ಆರಂಭಿಸಿದರು. ಗೆರಿಲ್ಲಾ ಯುದ್ಧದ ಪ್ರವರ್ತಕ ಎಂಬ ಬಿರುದನ್ನು ಪಡೆದುಕೊಂಡಿದ್ದು, ಧಾರ್ಮಿಕ ಸಹಿಷ್ಣುತೆಗೆ ಹೆಸರಾದ ರಾಜ್ಯವನ್ನು ನಿರ್ಮಿಸಿದರು. ಇವರ ಶೌರ್ಯದ ಯುದ್ಧಗಳು ಗತಕಾಲದ ಇತಿಹಾಸವನ್ನು ನೆನಪಿಸುತ್ತದೆ. ಯುವ ಪೀಳಿಗೆಗೆ ಮಾಹಿತಿಯನ್ನು ಒದಗಿಸುತ್ತದೆ. ರಾಷ್ಟ್ರ ಪ್ರೇಮವನ್ನು ಬೆಳೆಸುತ್ತದೆ. ಆದ್ದರಿಂದ ಇವರ ಆದರ್ಶ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಉಪ ತಹಸೀಲ್ದಾರ್ ನಾಗೇಂದ್ರ, ಶಿರಸ್ತೇದಾರ್ ಮಹದೇವನಾಯ್ಕ, ಆರ್‌ಐ ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿ ಕಾವ್ಯ, ಮುಖಂಡರಾದ ಮನುಕುಮಾರ್, ಗೋವಿಂದರಾಜು, ರಾಜರಾವ್ ಪವರ್, ಶಿವಶಂಕರ್, ಭರತ್‌ರಾವ್, ಹರೀಶ್ ರಾವ್, ಪದ್ಮಜಿರಾವ್, ಅರಣ್‌ರಾವ್, ಗಂಗೋಜಿ ರಾವ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net