

ಸವದತ್ತಿ: ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಯುವಕರಿಗೆ ಸದಾ ಸೂರ್ತಿ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಮರಾಠ ಸಮುದಾಯದಿಂದ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮ ರಕ್ಷಣೆಗೆ ಶಿವಾಜಿ ಮಹಾರಾಜರು ಹೋರಾಡಿದ ಹಾದಿ ಹಾಗೂ ರಾಷ್ಟ್ರಭಕ್ತಿ ಎಲ್ಲರಿಗೂ ಪ್ರೇರಣೆ. ಪಟ್ಟಣದ ಶಿವಾಜಿ ವೃತ್ತ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಗ್ರೇಡ-2 ತಹಸೀಲ್ದಾರ್ ಎಂ.ಎನ್.ಮಠದ, ಅಲ್ಲಮಪ್ರಭು ಪ್ರಭುನವರ, ಮರಾಠ ಸಮುದಾಯದ ಅಧ್ಯಕ್ಷ ಶಿವಾಜಿರಾವ ಶಿಂಧೆ, ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ಆರ್.ಆರ್.ಕುಲಕರ್ಣಿ, ಶಿರಸ್ತೇದಾರ ಶಶಿರಾಜ ವನಕಿ, ಬಸವರಾಜ ಕಪ್ಪಣ್ಣವರ, ಡಾ.ಹೇಮಂತ ಭಸ್ಮೆ, ಬಸವರಾಜ ಅರಮನಿ, ಮಂಜು ಪಾಚಂಗಿ, ರಾಜಶೇಖರ ನಿಡವಣಿ ಇತರರು ಇದ್ದರು.