ಶಿವಾಜಿ ಮಹಾರಾಜರ ಕೊಡುಗೆ ಅಪಾರ

Shivaji Maharaja, Talikote, Jeezamathe, Hindu Maha Ganapati,
ತಾಳಿಕೋಟೆಯಲ್ಲಿ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ರಂಗೋಲಿ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂತೋಷಭಟ್ ಜೋಶಿ, ಸೋಮಲಿಂಗ ಸ್ವಾಮಿಗಳು, ರಮೇಶ ಚವ್ಹಾಣ ಇತರರಿದ್ದರು.
Published on

ತಾಳಿಕೋಟೆ: ತಾಯಿ ಜೀಜಾಮಾತೆಯ ವರಪುತ್ರನಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಸನಾತನ ಧರ್ಮ ಉಳಿಯಬೇಕು. ವಿಶ್ವದಲ್ಲಿಯೇ ಹಿಂದು ಧರ್ಮ ಶ್ರೇಷ್ಠತೆ ಪಡೆಯಬೇಕೆಂದು ಸ್ಥಾಪಿಸಿದ ಹಿಂದು ಸಾಮ್ರಾಜ್ಯವನ್ನು ಎಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಭಟ್ ಜೋಶಿ ಹೇಳಿದರು.

ಪಟ್ಟಣದ ತಿಲಕ ರಸ್ತೆಯ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಆಯೋಜಿಸಿದ್ದ ಭಾರತ ಮಾತೆಯ ಪೂಜೆ ಕಾರ್ಯಕ್ರಮ ಹಾಗೂ ಮಾತೆಯರಿಗೆ ಉಡಿತುಂಬುವುದು, ದೀಪೋತ್ಸವ ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ತಾಯಂದಿರು ಕೇವಲ ಧಾರಾವಾಹಿಯ ಮಹಿಮೆಗಳಿಗೆ ವಾಲುತ್ತ ಮಕ್ಕಳು ಚಟುವಟಿಕೆಗಳತ್ತ ಗಮನ ಕೊಡುತ್ತಿಲ್ಲ. ಮಕ್ಕಳನ್ನು ಸನಾತನ ಧರ್ಮದ ಸಂಸ್ಕೃತಿಯಲ್ಲಿ ಬೆಳೆಸಬೇಕು. ಇದರಿಂದ ದೇಶ ರಕ್ಷಣೆಯ ಜತೆಗೆ ಧರ್ಮ ರಕ್ಷಣೆಗೆ ಒಳ್ಳೆಯ ಪ್ರಜೆಯನ್ನಾಗಿ ಮಾಡಿದ ಕೀರ್ತಿ ತಾಯಂದಿರಿಗೆ ಸಲ್ಲುತ್ತದೆ ಎಂದರು.

ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು ಮಾತನಾಡಿ, ಹಿಂದು ಧರ್ಮ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಚಿಮ್ಮಲಗಿ ಅರಳಲಿಕಟ್ಟಿಮನಿ ಹಿರೇಮಠದ ಸಿದ್ಧರೇಣುಕಾ ಶಿವಾಚಾರ್ಯರು ಮಾತನಾಡಿ, ಹಿಂದೂ ಧರ್ಮವೆನ್ನುವುದು ಈಗ ವಾಡಿಕೆಯಿಂದ ಬಂದಿದಲ್ಲ. ಬದಲಾಗಿದೆ ಸನಾತನವಾಗಿ ಹುಟ್ಟಿ ಬೆಳೆದು ಬಂದಿದ್ದಾಗಿದೆ. ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತಿರುವುದು ಸ್ಮರಣೀಯ ಎಂದರು.

ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಮುಖಂಡ ರಮೇಶ ಚವ್ಹಾಣ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಬಹುಮಾನ ವಿತರಿಸಲಾಯಿತು. ನಂತರ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ದೀಪೋತ್ಸವ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net