ಶಿವಾಜಿ ಮಹಾರಾಜರ ಆದರ್ಶ ಮೈಗೂಡಿಸಿಕೊಳ್ಳಿ

12mnv02
Published on

ಮಾನ್ವಿ: ಗಣೇಶೋತ್ಸವ, ದೀಪಾವಳಿ, ದಸರಾ ಹಬ್ಬಗಳನ್ನು ಆಚರಿಸುವುದರಿಂದ ಹಿಂದು ಧರ್ಮಕ್ಕೆ ಶಕ್ತಿ ತುಂಬಿದಂತಾಗುತ್ತದೆ. ಜಾತಿ, ಪಂಗಡ, ವರ್ಗಗಳನ್ನು ಬಿಟ್ಟು ನಾವೆಲ್ಲರು ಒಂದಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಛತ್ರಪತಿ ಯುವಕರ ಸೇನೆಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನಾತನ ಧರ್ಮವನ್ನು ಉಳಿಸುವುದಕ್ಕೆ ಎಲ್ಲ ಜಾತಿ, ಸಮುದಾಯದವರು ಕೂಡಿ ಹಬ್ಬವನ್ನು ಆಚರಿಸೋಣ. ಛತ್ರಪತಿ ಶಿವಾಜಿ ಮಹಾರಾಜ ಕಂಡ ಹಿಂದು ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಯುವಕರು ಮುಂದಾಗಿದ್ದು, ಮಾನ್ವಿ ಮುಂದಿನ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಶಯದಂತೆ ಹಿಂದುಗಳ ಸಶಕ್ತ ಕೇಂದ್ರವಾಗಲಿ. ಯುವ ಸಮುದಾಯ ಛತ್ರಪತಿ ಶಿವಾಜಿ ಮಹಾರಾಜರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಛತ್ರಪತಿ ಯುವಕರ ಸೇನೆ ತಾಲೂಕು ಅಧ್ಯಕ್ಷ ಬಸವನಗೌಡ ಅಲ್ದಾಳ, ವಿಶ್ವಹಿಂದು ಪರಿಷತ್ ಸ್ಥಳೀಯ ಘಟಕದ ಅಧ್ಯಕ್ಷ ವಿಜಯೇಂದ್ರ ಇಬ್ರಾಂಪುರ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಕುಮಾರ ಚಂದಾ, ವೀರೇಶ ಮಡಿವಾಳ, ಕೃಷ್ಣ, ಬಸವಪ್ರಭು ಮೇಟಿ, ಗುರುಸಿದ್ದನಗೌಡ ಕಣ್ಣೂರು, ವಿಶ್ವನಾಥ, ವೆಂಕಟೇಶ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net