ಶಿವಾಜಿ ಮಹಾರಾಜರು ಜನಿಸಿದ್ದು ಪುಣ್ಯ

shivaji
Published on

ಹುಬ್ಬಳ್ಳಿ: ನಗರದ ರಂಗ ರೇಖಾ ಕಲಾ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂದರ್ವ ಕಲಾ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 350ನೆಯ ಪಟ್ಟಾಭಿಷೇಕ ಕಾರ್ಯಕ್ರಮ ನಿಮಿತ್ತ ಛತ್ರಪತಿ ಶಿವಾಜಿ ನಾಟಕ ಪ್ರದರ್ಶಿಸಲಾಯಿತು.
ರಂಗಾಯಣ ಮಾಜಿ ನಿರ್ದೇಶಕ ಸುಭಾಷ ನರೇಂದ್ರ ಮಾತನಾಡಿ, ಶಿವಾಜಿ ಮಹಾರಾಜರಂಥವರು ದೇಶದಲ್ಲಿ ಜನಿಸಿದ್ದೇ ಪುಣ್ಯ. ಇಂಥ ಮಹಾಪುರುಷರಿಂದ ನಮ್ಮ ದೇಶ ಸುಭಿಕ್ಷೆಯಿಂದ ಕೂಡಿತ್ತು. ನಮ್ಮನ್ನು ಸಂರಕ್ಷಿಸುವ ಸಲುವಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಇಂಥವರ ಜೀವನಾಧಾರಿತ ನಾಟಕ ಪ್ರದರ್ಶನ ಕೈಗೊಂಡ ರಂಗ ರೇಖಾ ಕಲಾ ಬಳಗದ ಪ್ರಯತ್ನ ಶ್ಲಾಘನೀಯ ಎಂದರು. ನಂತರ ನಾಟಕ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಮುಖರಾದ ದಯಾನಂದ ಚವ್ಹಾಣ, ಗುರುರಾಜ ಕಾಟೆನವರ, ಪಾಂಡುರಂಗ ಗಾಯಕವಾಡ, ಮಹೇಶ ದಾಬಡೆ, ಕೇಶವ ಯಾದವ, ಎಚ್.ಎಸ್. ಕಿರಣ, ಮೋಹನ ಕಾಟ್ಕರ, ಸುಭಾಷ ಮೆಹರವಾಡೆ, ತುಕಾರಾಮ ಕಠಾರೆ, ವೀಣಾ ಅಟವಲೆ, ಆರ್.ಜಿ. ಪಾಟೀಲ, ಮೊಹನ ಗೌಳಿ, ಮನೀಷ ಶಿಂಧೆ, ವಿನೋದ ಅಂಗಡಿ, ವಾಗೇಶ ಭಿಕ್ಷಾವರ್ತಿಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net