ಜೀವನ, ತತ್ವಾದರ್ಶ ಅನುಕರಣೀಯ

web 2
Published on

ಶಿವಮೊಗ್ಗ: ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸವಿತಾ ಮಹರ್ಷಿಗಳಿಬ್ಬರೂ ಮಹಾನ್ ಚೇತನ. ಇವರಿಬ್ಬರ ಜೀವನ ಹಾಗೂ ತತ್ವಾದರ್ಶಗಳು ಅನುಕರಣೀಯ ಎಂದು ಎಡಿಸಿ ಜಿ.ಅನುರಾಧಾ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮತ್ತು ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿ, ಶಿವಾಜಿ ಹಾಗೂ ಸವಿತಾ ಮಹರ್ಷಿ ಇಬ್ಬರ ಜೀವನದ ಉದ್ದೇಶ ಬಹುತೇಕ ಒಂದೇ ಬಗೆಯದ್ದು. ಮೇಲು ಕೀಳೆಂಬ ಭಾವನೆ ತೊಡೆದು ಹಾಕಲು ಇಬ್ಬರೂ ಶ್ರಮಿಸಿದ್ದಾರೆ. ಛತ್ರಪತಿ ಶಿವಾಜಿ ದೇಶದ ಐಕ್ಯತೆ ಗಟ್ಟಿಗೊಳಿಸುವ ಜತೆಗೆ ಪರಕೀಯರ ಆಕ್ರಮಣದಿಂದ ದೇಶದ ಜನರನ್ನು ರಕ್ಷಿಸಲು ಹೋರಾಡಿದವರು. ಇದೇ ಕಾರಣಕ್ಕೆ ಇತಿಹಾಸದ ಪುಟಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಚ್.ಬಿ.ರಮೇಶ್ ಬಾಬು, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬಾಲು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net