ಶಿವಾಜಿ ಜಯಂತಿ ಅಂಗವಾಗಿ ಶೋಭಾಯಾತ್ರೆ

Shivaji Jayanti
ಗುಳೇದಗುಡ್ಡದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಛತ್ರಪತಿ ಶಿವಾಜಿಮಹಾರಾಜ ಜಯಂತಿ ಅಂಗವಾಗಿ ಭವ್ಯ ಶೋಭಾಯಾತ್ರೆ ನಡೆಯಿತು.
Published on

ಗುಳೇದಗುಡ್ಡ: ಛತ್ರಪತಿ ಶಿವಾಜಿಮಹಾರಾಜರ 395ನೇ ಜಯಂತ್ಯುತ್ಸವದ ಅಂಗವಾಗಿ ವಿವಿಧ ಹಿಂದುಪರ ಸಂಘಟನೆಗಳಿಂದ ನಗರದಲ್ಲಿ ಭಾನುವಾರ ಭವ್ಯ ಶೋಭಾಯಾತ್ರೆ ನೆರವೇರಿತು.

ಪಟ್ಟಣದ ಬನ್ನಿಕಟ್ಟಿಯಿಂದ ತ್ರೈಯಂಭಕೇಶ್ವರ ದೇವಸ್ಥಾನದಿಂದ ಆರಂಭಗೊಂಡ ಛತ್ರಪತಿ ಶಿವಾಜಿಮಹಾರಾಜರ ಮೂರ್ತಿಯ ಶೋಭಾಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಗುರುಸಿದ್ಧೇಶ್ವರ ಮಠದ ಶ್ರೀಗುರಸಿದ್ಧ ಪಟ್ಟದಾರ್ಯ ಸ್ವಾಮಿಗಳು ಚಾಲನೆ ನೀಡಿದರು.

ಶೋಭಾಯಾತ್ರೆಯು ಪಟ್ಟಣದ ಪುರಸಭೆ, ಪವಾರ ಕ್ರಾಸ್, ನೀಕಂಠೇಶ್ವರ ದೇವಸ್ಥಾನ, ಸಾಲೇಶ್ವರ ದೇವಸ್ಥಾನ, ಹರದೊಳ್ಳಿ, ಭಂಡಾರಿ ಕಾಲೇಜು ಸರ್ಕಲ್, ಮೂಕೇಶ್ವರ ಮಹಾದ್ವಾರ, ಅರಳಿಕಟ್ಟೆ, ಚೌಬಜಾರದ ಮೂಲಕ ಗಚ್ಚಿನಕಟ್ಟಿ ತಲುಪಿತು.

ಭುವನ ಪೂಜಾರಿ, ಮಹೇಶ ಸೂಳಿಭಾವಿ, ಸಂಜಯ ಕಾರಕೂನ, ಪ್ರಶಾಂತ ಜವಳಿ, ಶ್ರೀಕಾಂತ ಭಾವಿ, ಕಮಲಕಿಶೋರ ಮಾಲಪಾಣಿ, ಆಸಂಗೆಪ್ಪ ನಕ್ಕರಗುಂದಿ, ಶಿವಾನಂದ ಬಾದವಾಡಗಿ, ವಸಂತಸಾ ಧೋಂಗಡೆ, ಪ್ರಕಾಶ ಕಾವಡೆ, ಬಸವರಾಜ ಕುಂಬಾರ, ವಿಠ್ಠಲ ಪತ್ತಾರ, ಶಂಕರ ರೂಢಗಿ, ರಾಮು ಮಿಣಜಗಿ ಬಾಳು ನಿರಂಜನ, ಸಿದ್ದು ನಾಯನೇಗಲಿ, ಯೋಗೇಶ ಉಂಕಿ, ಶಿವು ತುಪ್ಪದ, ಪ್ರಭು ಕಳ್ಳಿಗುಡ್ಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net