ಕರಾವಳಿಯಲ್ಲಿ ಶಿವಾಜಿ ಜಯಂತಿ ಆಚರಣೆ

shivaji new
Published on

ಮಂಗಳೂರು: ಛತ್ರಪತಿ ಶಿವಾಜಿ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಗಡಿ-ಸೀಮೆ ಅವರಿಗಿಲ್ಲ. ಎಲ್ಲ ಸಮುದಾಯಕ್ಕೂ ಶಿವಾಜಿ ಶ್ರೇಷ್ಠರಾಗಿದ್ದು, ಅವರ ತತ್ವಗಳನ್ನು ಮೈಗೂಡಿಸಿಕೊಂಡಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರಭಕ್ತಿಯ ಕಿಚ್ಚು ನಮ್ಮಲ್ಲೂ ಮೂಡುತ್ತದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದ.ಕ ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಆರ್ಯ ಯಾನೆ ಮರಾಠ ಸಮಾಜ ಸಂಘ ಆಶ್ರಯದಲ್ಲಿ ಬುಧವಾರ ಹಂಪನಕಟ್ಟೆ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಉರ್ವ ಕೆನರಾ ಪ್ರೌಢಶಾಲೆ ಶಿಕ್ಷಕ ರವೀಂದ್ರನಾಥ ಶೆಟ್ಟಿ ಶಿವಾಜಿ ಜಯಂತಿ ಉಪನ್ಯಾಸ ನೀಡಿದರು.

ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮಂಗಳೂರು ಅಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್ಮೋರೆ, ಆರ್ಯ ಯಾನೆ ಮರಾಠ ಸಮಾಜ ಸಂಘ ಅಧ್ಯಕ್ಷ ಯತೀಂದ್ರ ಎ.ಬಹುಮಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಮಹಾನಗರ ಪಾಲಿಕೆ ಚುನಾಯಿತ ಸದಸ್ಯರಾದ ದಿವಾಕರ ಪಾಂಡೇಶ್ವರ, ವೀಣಾಮಂಗಳಾ, ರಾಮಕ್ಷತಿಯ ಸಂಘದ ಪದಾಧಿಕಾರಿ ಜೆ.ಕೆ.ರಾವ್, ಪರಿಷತ್ ಪದಾಧಿಕಾರಿಗಳಾದ ನಾಗೇಶ್ ಎನ್.ಪಂಡಿತ್, ಮಾಧವ ರಾವ್, ಚಂದ್ರಶೇಖರ್ ಚಂದ್ರಮಾನ್ ಮೊದಲಾದವರು ಉಪಸ್ಥಿತರಿದ್ದರು. ಮರಾಠ ಸಮಾಜದ ಬೇಡಿಕೆಗಳ ಮನವಿ ಪತ್ರವನ್ನು ಇಲಾಖಾ ಅಧಿಕಾರಿಗೆ ಹಸ್ತಾಂತರಿಸಲಾಯಿತು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಭಾಷೆಗಳಿವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮಾತ್ರ ರಾಜ್ಯಭಾಷೆ ಸ್ಥಾನಮಾನವಿದೆ. ಸ್ವಂತ ಲಿಪಿ, ಕ್ಯಾಲೆಂಡರ್ ಇರುವ ಹಾಗೂ ಒಂದೂವರೆ ಕೋಟಿ ಜನ ಮಾತನಾಡುವ ತುಳು ಭಾಷೆಗೆ ರಾಜ್ಯಭಾಷೆ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ. ಇದಕ್ಕೆ ಮರಾಠಿಗರ ಸಹಕಾರವೂ ಅವಶ್ಯ. - ದಯಾನಂದ ಕತ್ತಲ್‌ಸಾರ್ ಅಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net