ಪ್ರಗತಿಯತ್ತ ಶಿವಾಜಿ ಸೌಹಾರ್ದ ಸಹಕಾರಿ

10MANJARI1-1.jpg
Published on

ಮಾಂಜರಿ: ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಸಕ್ತ ಸಾಲಿನಲ್ಲಿ 34.13 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು  ಅಧ್ಯಕ್ಷ ರಾಮಚಂದ್ರ ಭೋಸಲೆ ಹೇಳಿದರು.

ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಸಹಕಾರಿಯ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ರಾಮಚಂದ್ರ ಭೋಸಲೆ ಮಾತನಾಡಿದರು. ಅಮರ ಯಾದವ, ಸುಖದೇವ ಪಾಟೋಳೆ, ಅಶೋಕ ಕಾಳವೀರ, ಪರಶುರಾಮ ಥೋರಸೆ ಇತರರಿದ್ದರು.
ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಸಹಕಾರಿಯ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ರಾಮಚಂದ್ರ ಭೋಸಲೆ ಮಾತನಾಡಿದರು. ಅಮರ ಯಾದವ, ಸುಖದೇವ ಪಾಟೋಳೆ, ಅಶೋಕ ಕಾಳವೀರ, ಪರಶುರಾಮ ಥೋರಸೆ ಇತರರಿದ್ದರು.

ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 28ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಾಸಾಹೇಬ ಯಾದವ ಮಾರ್ಗದರ್ಶನದಲ್ಲಿ ಸಂಘ ಗ್ರಾಮೀಣ ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಆರ್ಥಿಕ ಸಹಾಯ ನೀಡಿ, ಅವರ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.

ಸಂಘದ ಸಿಇಒ ಸುಖದೇವ ಪಾಟೋಳೆ ಮಾತನಾಡಿ, ಸಂಘದಲ್ಲಿ 1161 ಸದಸ್ಯರಿದ್ದು, 8.90 ಲಕ್ಷ ರೂ.ಷೇರು ಬಂಡವಾಳ ಹೊಂದಿದೆ. 12.97 ಕೋಟಿ ರೂ. ಠೇವಣಿ ಹೊಂದಿದ್ದು, 9.4 ಕೋಟಿ ರೂ. ಸಾಲ ವಿತರಿಸಲಾಗಿದೆ. 18.36 ಕೋಟಿ ರೂ. ದುಡಿಯುವ ಬಂಡವಾಳ, 2.83 ಕೋಟಿ ರೂ. ಕಾಯ್ದಿಟ್ಟ ನಿ ಹೊಂದಿದೆ. 5.64 ಕೋಟಿ ರೂ. ಹೂಡಿಕೆ ಮಾಡಿದೆ. ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸಲಾಗುವುದು ಎಂದರು.

ಮಾಂಜರಿ, ಇಂಗಳಿ ಮತ್ತು ಉಗಾರ ಗ್ರಾಮದ ಹತ್ತನೇ ತರಗತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮರ ಯಾದವ, ಸಂಘದ ಉಪಾಧ್ಯಕ್ಷ ಅಶೋಕ ಕಾಳವೀರ, ನಿರ್ದೇಶಕರಾದ ಪರಶುರಾಮ ಥೋರಸೆ, ಮೋಹನ ಲೋಕರೆ, ವಿಶ್ವಾಸ ರಸಾಳೆ, ಜ್ಞಾನೇಶ್ವರ ಪಾಟೋಳೆ, ವಿಠ್ಠಲ ಟೊನಪೆ, ಬಬ್ರುವಾಹನ ಸಾರಾಪೂರೆ, ಜಹಾಂಗಿರ್ ಕೊತಳಿ, ಸುಶೀಲಾ ಕಾಡಾಪುರೆ, ಸುಷ್ಮಾ ರೋಡೆ, ಚಂದ್ರಸೇನ ಕದಂ, ವಿನೋದ ಥೋರಸೆ, ಏಕನಾಥ ಗಿಡ್ಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net