

ಉಡುಪಿ: ದೇಶದ 142 ಕೋಟಿ ಜನ ಇಂದಿಗೂ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಹಿಂದು ಹೃದಯ ಸಾಮ್ರಾಟ ಛತಪತಿ ಶಿವಾಜಿ ಮಹಾರಾಜ್ ಅವರೇ ಕಾರಣ. ಇಂದಿನ ಯುವಸಮುದಾಯಕ್ಕೆ ಶಿವಾಜಿಯ ಚರಿತ್ರೆ ತಿಳಿದಿಲ್ಲ. ಆತನ ಶೌರ್ಯ, ಪರಾಕ್ರಮಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಗುರುಪ್ರಸಾದ್ ಭಟ್ ಉಡುಪಿ ವಿರಚಿತ "ಛತ್ರಪತಿ' ನಾ ಕಂಡಂತೆ ಶಿವಾಜಿ ಎಂಬ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ಸಾವರ್ಕರ್ ವೃತ್ತ, ಶಿವಾಜಿ ಪುತ್ಥಳಿ ಮಾಡಿಯೇ ಸಿದ್ಧ
ಉಡುಪಿಯ ಬ್ರಹ್ಮಗಿರಿಯಲ್ಲಿ ಇಂದು ಶಿವಾಜಿಯ ಚರಿತ್ರೆ ಕುರಿತ ಪುಸ್ತಕ ಬಿಡುಗಡೆ ಆಗಿದೆ. ಈ ಹಿಂದೆ ನಾನು ಶಾಸಕನಾಗುವ ಮೊದಲು ಶಿವಾಜಿಯ ಶ್ರೇಷ್ಠತೆ ಸಾರಿದ್ದ ವೀರ ಸಾರ್ವಕರ್ ಅವರ ಹೆಸರನ್ನು ಬ್ರಹ್ಮಗಿರಿಯ ಸರ್ಕಲ್ಗೆ ನಾಮಕರಣ ಮಾಡಲು ಅಪಾರ ಪ್ರಯತ್ನ ಮಾಡಿದ್ದೆ. ಆದರೆ, ರಾಜಕಾರಣದಿಂದಾಗಿ ಅದು ಅಂದು ಸಾಧ್ಯವಾಗಿರಲಿಲ್ಲ. ಜನರ ಹಾಗೂ ದೇವರ ಆಶೀರ್ವಾದದಿಂದ ನಾನೀಗ ಶಾಸಕನಾಗಿದ್ದು, ಬ್ರಹ್ಮಗಿರಿಗೆ ಸಾರ್ವಕರ್ ಸರ್ಕಲ್ ಎಂದು ನಾಮಕರಣ ಮಾಡಿಯೇ ಸಿದ್ಧ. ಇದಲ್ಲದೆ, ಮಲ್ಪೆ ಬೀಚ್ನಲ್ಲಿ ಶಿವಾಜಿಯ ಪುತ್ಥಳಿ ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಯಶ್ಪಾಲ್ ತಿಳಿಸಿದರು.