ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು

DPT-20-1
Published on

 ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ

ಇಂದು ನಾವು ಮಾಡಿದ ಸಮಾಜ ಕಾರ್ಯ ನಮ್ಮ ನಂತರವೂ ಶಾಶ್ವತವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು

ಆದಿ ಚುಂಚನಗಿರಿ ಶಾಖೆಯ ಶ್ರೀಸಾಯಿ ಕೀರ್ತನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಸೋಂಪುರದ ಶಿವಗಂಗೆ ಕ್ಷೇತ್ರದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದೀಕ್ಷೆ ದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮುಂದೊಂದು ದಿನ ನಾವೆಲ್ಲರೂ ಈ ಭೂಮಿಯ ಮೇಲೆ ಇರುವುದಿಲ್ಲ ಆದರೆ ನಾವು ನೆಟ್ಟ ಗಿಡ ಮರವಾಗಿ ಹೆಮ್ಮೆರವಾಗಿ ಬೆಳೆದು ಗಾಳಿ, ನೆರಳು, ಹಣ್ಣುಗಳನ್ನು ಕೊಟ್ಟು ಪ್ರಪಂಚದ ಜೀವರಾಶಿಗೆ ನೆರವಾಗುತ್ತದೆ ಇದರಿಂದ ನಮ್ಮ ಜನ್ಮವೂ ಸಾರ್ಥಕ ಪಡೆಯುವಂತಾಗುತ್ತದೆ ಎಂದು ಹೇಳಿದರು.

ಸಸಿ ನೆಟ್ಟು ಪೋಷಿಸಬೇಕು:

ದಕ್ಷಿಣ ಕಾಶಿ ಎಂದು ಹೆಸರಾಗಿರುವ ಶಿವಗಂಗೆ ಪುಣ್ಯಕ್ಷೇತ್ರದ ಹಿಪ್ಪೆತೋಪಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನಾರ್ಹವಾಗಿದೆ ಎಂದರು. ಸಸಿಗಳನ್ನು ನೆಡುವುದಷ್ಟೇ ಕೆಲಸವಲ್ಲ ನೆಟ್ಟ ಸಸಿಗಳ ಪೋಷಣೆಯೂ ಮುಖ್ಯ ಈ ನಿಟ್ಟಿನಲ್ಲಿ ಸಾರ್ವಜನಿಕರು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಬೇಕು ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮನವಿ ಮಾಡಿದರು. ಕರೊನಾ ಕಾಲಘಟ್ಟದಲ್ಲಿ ಆಮ್ಲಜನಕದ ಮಹತ್ವ ಎಷ್ಟೆಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ನಮ್ಮ ಜೀವನಾಡಿಯಾಗಿರುವ ಹಸಿರನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net