ಶಿವಗಂಗೆಯಲ್ಲಿ ಬೆಟ್ಟ ಏರುವವರ ನೆರವಿಗಾಗಿ ಅಳವಡಿಸಿದ್ದ ಕಂಬಿಗಳ ದುರಸ್ತಿ, ವಿಜಯವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳು

10 dpt kabiynnu sri mawiruvudu
Published on

ದಾಬಸ್‌ಪೇಟೆ: ಶಿವಗಂಗೆ ಬೆಟ್ಟದಲ್ಲಿ ತುಕ್ಕು ಹಿಡಿದ ಕಬ್ಬಿಣದ ರಾಡ್ ಬದಲಿಸುವ ಕಾಮಗಾರಿ ಭರದಿಂದ ಸಾಗಿದೆ.

ಬೆಟ್ಟ ಏರಲು ಯಾತ್ರಿಕರಿಗೆ ನೆರವಾಗಲು ಅಳವಡಿಸಿರುವ ಕಂಬಿ ಅಲ್ಲಲ್ಲಿ ತುಕ್ಕು ಹಿಡಿದು ಮುರಿಯುವ ಹಂತಕ್ಕೆ ತಲುಪಿದ್ದವು. ಈ ಬಗ್ಗೆ ವಿಜಯವಾಣಿ ಡಿ.27ರಂದು ‘ಶಿಖರವೇರಲು ಜೀವಭಯ’ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದ ವರದಿಗೆ ಎಚ್ಚೆತ್ತ ಅಧಿಕಾರಿಗಳು ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ.

ಶಿವಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತರಾಜು ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು 1 ಕೋಟಿ ರೂ. ಶಿವಗಂಗೆ ಅಭಿವೃದ್ಧಿಗೆ ದೊರೆತಿದೆ. ಜ.15ರಂದು ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶ್ರೀ ಗಂಗಾಧರೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಟಿ.ಸಿದ್ದರಾಜು ಮಾತನಾಡಿ, ತಾತ್ಕಾಲಿಕವಾಗಿ ಕಂಬಿ ನಡೆಸಿ ಹಾಗೂ ಕೆಲವು ಕಡೆ ವೆಲ್ಡಿಂಗ್ ಮಾಡಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net