ಶಿವಗಂಗಾ ಕ್ಷೇತ್ರ ದೇಗುಲಗಳ ತವರು

2
ಶಿವಗಂಗೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮರಿಹೊನ್ನದೇವಿ ಗರ್ಭಗುಡಿ ಕುಂಭಾಭಿಷೇಕ ಮಹೋತ್ಸವದಲ್ಲಿ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ಸೋಂಪುರ ಎಂ.ರುದ್ರೇಶ್, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಜಿ.ಮುನಿರಾಜು ಇತರರು ಇದ್ದರು.
Published on

ಕುಂಭಾಭಿಷೇಕದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಬಣ್ಣನೆ

ದಾಬಸ್‌ಪೇಟೆ : ಮರಿಹೊನ್ನಮ್ಮ ದೇವಸ್ಥಾನ ಮಡಿವಂತಿಕೆಯನ್ನು ದೂರ ಇಟ್ಟು ಸಮಸ್ತರನ್ನೂ ಆಕರ್ಷಿಸಿ ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡುವ ಕ್ಷೇತ್ರವಾಗಿದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಮರಿ ಹೊನ್ನದೇವಿಯವರ ಗರ್ಭಗುಡಿ ಕುಂಭಾಭಿಷೇಕ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇವಾಲಯಗಳ ತವರಾಗಿರುವ ಈ ಕ್ಷೇತ್ರದಲ್ಲಿ ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದು ಇಲ್ಲಿಯ ಜನರನ್ನು ಭಕ್ತಿಯೆಡೆಗೆ ಕೊಂಡೊಯ್ಯುತ್ತದೆ. ಈ ನಿಟ್ಟಿನಲ್ಲಿ ಈ ಭಾಗದ ಜನರು ದೇವಿಯ ಕೃಪೆಗೆ ಹೆಚ್ಚು ಪಾತ್ರರಾಗಿದ್ದಾರೆ ಎಂದ ಶ್ರೀಗಳು, ದೇವತೆ, ಶಿಥಿಲಗೊಂಡ ದೇವಸ್ಥಾನವನ್ನು ಸೋಂಪುರ ರುದ್ರೇಶ್ ಹಾಗೂ ಭಕ್ತರು ಜೀರ್ಣೋದ್ಧಾರ ಮಾಡಿರುವುದು ಮಾದರಿ ವಿಷಯವಾಗಿದೆ. ಐತಿಹಾಸಿಕ ಶಿವಗಂಗಾ ಕ್ಷೇತ್ರ ದೇಗುಲಗಳ ತವರು. ಇಲ್ಲಿ ಶಿಲೆಗೂ ಇತಿಹಾಸವಿದೆ. ಇಲ್ಲಿಯ ಜಲವೆಲ್ಲವೂ ತೀರ್ಥವಾಗಿದೆ. ಎಲ್ಲರ ಜೀವನದಲ್ಲೂ ಸುಖ ಶಾಂತಿ ನೆಲೆಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ಸೋಂಪುರ ಎಂ.ರುದ್ರೇಶ್, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಜಿ.ಮುನಿರಾಜು, ಶಿವಗಂಗೆ ಗ್ರಾಪಂ ಸಂತೋಷ್, ಮಾಜಿ.ಅಧ್ಯಕ್ಷ ಕೆ.ಬಿ.ಪ್ರಭುದೇವ, ಎಸ್.ಸಿ. ಹೋನ್ನಗಂಗ ಶೆಟ್ಟಿ, ಟ್ರಸ್ಟಿ ಎಸ್.ಟಿ.ಸಿದ್ದರಾಜು, ಪ್ರೇಮಾ ತೀರ್ಥಪ್ರಸಾದ್, ಸೋಮ ಶೇಖರ್, ಬಸವರಾಜು, ಬಿ.ಎನ್.ಮನೋಹರ್, ಎಡೇಹಳ್ಳಿ ಶಶಿಧರ, ಬಿ.ಸಿ.ರಾಜಣ್ಣ ರೇಣುಕೇಶ, ಟಿ.ಉಮೇಶ್, ಗ್ರಾಪಂ ಸದಸ್ಯರಾದ ಉಮಾ ರೇವಣ್ಣ, ಮಂಜುನಾಥ, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ಚಂದ್ರಕುಮಾರ, ಪುಟ್ಟಸಿದ್ಧ, ಕೆ.ವಸಂತ ಕುಮಾರ, ಶ್ರೀ ಮರಿಹೊನ್ನಮ್ಮ ದೇವಿ ಅರ್ಚಕರಾದ ನಾಗೇಶ ನಾಯಕ, ಮಣಿಕಂಠ, ನಾಗರಾಜು, ಮರಿಯಣ್ಣ, ನಾಗಣ್ಣ ಇದ್ದರು.

ಸಂಸ್ಕೃತಿ ಬಿಂಬಿಸಿ

ದೇವರು, ದೇಗುಲದ ಬಗ್ಗೆ ಭಕ್ತಿ ಬೆಳೆಸಿಕೊಳ್ಳಬೇಕು. ದೇವಾಲಯಗಳ ಅಭಿವೃದ್ಧಿ ಕಾರ್ಯದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ದೇಗುಲಗಳಿದ್ದರೆ ಸಂಸ್ಕಾರ ದೊರೆಯುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಿಕೊಂಡವರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವರು. ಇದರೊಟ್ಟಿಗೆ ಉತ್ತಮ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು. ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯವಾಗಬೇಕು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ಅಂತೆಯೇ ಶಿವಗಂಗಾ ಕ್ಷೇತ್ರದ ಐತಿಹಾಸಿಕ ದೇಗುಲದ ಶಿಲಾ ಮಂಟಪದ ಉದ್ಘಾಟನೆ ಹಾಗೂ ನಿರ್ಮಾಣಕ್ಕೆ ಭಾಗಿಯಾಗಿರುವ ಸೋಂಪುರ ರುದ್ರೇಶ್ ಹಾಗೂ ಅಪಾರ ಭಕ್ತರ ಸಹಕಾರದಿಂದ ಶಿವಗಂಗಾ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಅಭಿವೃದ್ಧಿಗೆ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಮರಿಹೊನ್ನಮ್ಮ ದೇವಾಲಯ ಕಾರಣ. ಸಾವಿರಾರು ಭಕ್ತರು ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಎಲ್ಲರಲ್ಲೂ ಭಕ್ತಿ ಭಾವ ಮೀರಿದೆ ಎಂದರು.

ವಿವಿಧ ಹೋಮ, ಪೂಜೆ

ದೇವಸ್ಥಾನದ ಆಗಮಿಕರಾದ ಎಸ್.ಎಸ್.ಸೋಮಸುಂದರ್, ಅರ್ಚಕರಾದ ಎಸ್.ಕೆ.ಶ್ಯಾಂ ಪ್ರಸಾದ್ ದೀಕ್ಷಿತ್, ನವೀನ್ ಕುಮಾರ್ ದೀಕ್ಷಿತ್ ತಂಡದಿಂದ ದೇವಿಯ ಅನುಜ್ಞೆ , ಗ್ರಾಮ ಪ್ರದಕ್ಷಿಣೆ ಪೂರ್ವಕ, ಗಂಗಾಪೂಜೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಗುರು ಪ್ರಾರ್ಥನೆ, ಪಂಚಗವ್ಯ, ಸಹಸ್ರ ಮೋದಕ ಹೋಮ, ಪೂರ್ಣಾಹುತಿ, ಮಂಗಳಾರತಿ, ವೇದಪುರಾಣ, ವಾಸ್ತು ಮಂಡಲ ಪೂಜೆ, ವಾಸ್ತು ಹೋಮ, ವಾಸ್ತುಪರ್ಯಗ್ನಿಕರಣ, ಮೃತ್ಸಗ್ರಹಣ, ಅಂಕುರಾರ್ಪಣೆ, ರಕ್ಷಬಂಧನ, ದೇವರ ಸನ್ನಿಧಿಯಲ್ಲಿ ಕುಂಭಾಭಿಷೇಕ ಅಂಗವಾಗಿ ಪೂಜೆ, ಹೋಮಾದಿಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net