

ಕೊಪ್ಪಳ: ಸ್ವಾತಂತ್ರ ನಂತರ ಬಂಡವಾಳಶಾಹಿಗಳ ಕೈಗೆ ದೇಶ ಹೋಗಿದ್ದನ್ನು ಖಂಡಿಸಿ ಬಡ, ಕಾರ್ಮಿಕರ ಪರ ಹೋರಾಡಿದವರು ಶಿವದಾಸ್ ಘೋಷ್ ಎಂದು ಎಸ್ಯುಸಿಐ(ಕಮ್ಯುನಿಷ್ಟ್) ಸದಸ್ಯ ಶರಣು ಪಾಟೀಲ್ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವದಾಸ್ ಘೋಷ್ ಅವರ 48ನೇ ಸ್ಮರಣೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟಿಷರು ಭಾರತ ಬಿಟ್ಟು ತೊಲಗಿದ ಮೇಲೆ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಿತು ಎಂದು ಎಲ್ಲರು ಸಂಭ್ರಮಿಸಿದರು. ಸ್ವತಂತ್ರ ಸಿಕ್ಕಿದ್ದು ಬಂಡವಾಳಶಾಹಿಗಳಿಗೆ ಹೊರತು ರೈತ ಕಾರ್ಮಿಕರಿಗಲ್ಲ ಎಂದು ಹೇಳಿದ ಶಿವಾದಾಸ್ರು 1948ರಲ್ಲಿ ಎಸ್ಯುಸಿಐ (ಕಮ್ಯುನಿಷ್ಟ) ಪಕ್ಷ ಸ್ಥಾಪಿಸಿದರು. ದೇಶದ ತುಂಬಾ ರೈತ, ಕಾರ್ಮಿಕ, ವಿದ್ಯಾರ್ಥಿಗಳ, ಯುವಜನರ ಮತ್ತು ಮಹಿಳೆಯರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಯುತ್ತಿವೆ. ಈ ಹೋರಾಟಗಳ ಮೂಲಕ ಅಂತಿಮವಾಗಿ ಸಮಾಜವಾದಿ ವ್ಯವಸ್ಥೆ ಸ್ಥಾಪನೆಯಾಗಲಿದೆ ಎಂದರು. ಪಕ್ಷದ ಪದಾಧಿಕಾರಿಗಳಾದ ಮಂಜುಳಾ ಮಜ್ಜಿಗಿ, ಶಾರದಾ, ಸುಭಾನ್ ನೀರಲಗಿ, ದೇವರಾಜ್ ಹೊಸಮನಿ, ಆರ್.ವಿ.ಕಾಮನೂರು ಇದ್ದರು.