ಶಿವಭಾಗ್ ಸರಣಿ ಅಪಘಾತ ಬಾಲಕಿಗೆ ಗಾಯ

accident-15
Published on


ಮಂಗಳೂರು: ನಗರದ ಶಿವಭಾಗ್‌ನಲ್ಲಿ ಗುರುವಾರ ಸರಣಿ ಅಪಘಾತ ನಡೆದು ಪಾದಚಾರಿ ಬಾಲಕಿಗೆ ಗಾಯವಾಗಿದೆ. ಹಲವು ವಾಹನಗಳು ಜಖಂಗೊಂಡಿವೆ.

ಶಿವಭಾಗ್ ರಸ್ತೆಯಿಂದ ಮಲ್ಲಿಕಟ್ಟೆ ಕಡೆಗೆ ಇರುವ ಇಳಿಜಾರು ರಸ್ತೆಯಲ್ಲಿ ವ್ಯಾಗ್‌ನರ್ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ. ಮುಂಭಾಗದಲ್ಲಿ ಚಲಿಸುತ್ತಿದ್ದ ಟೆಂಪೋಗೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋ ಬಲಕ್ಕೆ ಭಾಗಕ್ಕೆ ಚಲಿಸಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದೀಕ್ಷಿತ್ ಶೆಟ್ಟಿ ಎಂಬವರ ಬೈಕ್‌ಗೆ, ಅದರ ಬದಿಯಲ್ಲಿ ಪಾರ್ಕಿಂಗ್ ಮಾಡಲಾದ ಇನ್ನೊಂದು ಬೈಕ್‌ಗೆ ಮತ್ತು ಓಮ್ನಿ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಕಮಲಾಕ್ಷಿ (16) ಗಾಯಗೊಂಡಿದ್ದಾರೆ. ಕಾರು ಮುಂದಕ್ಕೆ ಚಲಿಸಿ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಗಾಯಾಳುವನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾರು ಚಾಲಕ ಪೌಲ್ ಜೋಸೆಫ್ ರಸ್ಕಿನ್ಹಾ ಅವರ ಮೇಲೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net