ಜಕ್ಕನಹಳ್ಳಿ ಗ್ರಾಮದಲ್ಲಿ ಶಿವಾಲಯ ಲೋಕಾರ್ಪಣೆ

 ಮುದಿಗೆರೆ ಓಂಕಾರೇಶ್ವರ ದೇಗುಲದ ಧರ್ಮದರ್ಶಿ ಮಂಜುನಾಥ ಭಟ್ಟ ಮತ್ತು ಪುರೋಹಿತರು ಶಿವನ ದೇವಾಲಯದ ವಿಮಾನ ಗೋಪುರಕ್ಕೆ ಕಳಸ ಸ್ಥಾಪನೆ ಮಾಡುತ್ತಿರುವುದು.
ಮುದಿಗೆರೆ ಓಂಕಾರೇಶ್ವರ ದೇಗುಲದ ಧರ್ಮದರ್ಶಿ ಮಂಜುನಾಥ ಭಟ್ಟ ಮತ್ತು ಪುರೋಹಿತರು ಶಿವನ ದೇವಾಲಯದ ವಿಮಾನ ಗೋಪುರಕ್ಕೆ ಕಳಸ ಸ್ಥಾಪನೆ ಮಾಡುತ್ತಿರುವುದು.
Published on

ಗಂಡಸಿ: ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶಿವಾಲಯ ಲೋಕಾರ್ಪಣೆ, ವಿಮಾನ ಗೋಪುರದ ಕಲಶ ಸ್ಥಾಪನೆ, ಮಹಾ ಕುಂಭಾಭಿಷೇಕ ಕಾರ್ಯ ಭಾನುವಾರ, ಸೋಮವಾರ ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸೋಮವಾರ ಬೆಳಗ್ಗೆ 6 ಗಂಟೆಗೆ ಮುದಿಗೆರೆ ಓಂಕಾರೇಶ್ವರ ದೇಗುಲದ ಧರ್ಮದರ್ಶಿ ಮಂಜುನಾಥ ಭಟ್ಟರು ಮತ್ತು ಪುರೋಹಿತರ ತಂಡದಿಂದ ಸುಪ್ರಭಾತ, ಗಂಗಾಪೂಜೆ, ಸ್ವಾಸ್ತಿವಾಚನ, ಪ್ರಾಣ ಪ್ರತಿಷ್ಠಾಪನೆ, ಪೂರ್ಣಾಹುತಿ ನಡೆಯಿತು. ಬಳಿಕ 11.40ಕ್ಕೆ ಶುಭ ಮಕರ ಲಗ್ನದಲ್ಲಿ ವಿಮಾನ ಗೋಪುರಕ್ಕೆ ಕಳಸ ಸ್ಥಾಪನೆ ಮತ್ತು ಮಹಾ ಕುಂಭಾಭಿಷೇಕ ನೆರವೇರಿಸಲಾಯಿತು.

ಎಲ್ಲ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಶಿವನ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಯರಗನಾಳು ಮಲ್ಲೇಶ್, ಮುಖಂಡರಾದ ಜಿ.ಎನ್.ದ್ಯಾವೇಗೌಡ, ಹೊಸೂರು ಗಂಗಾಧರ್, ಗಂಡಸಿ ಮಂಜಣ್ಣ ಇತರ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net