ಗೋಕರ್ಣ:ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ಮಂದಿರದಲ್ಲಿ ವಾರ್ಷಿಕ ಶ್ರೀಶಿವ-ಗಂಗಾ ವಿವಾಹ ನಿಶ್ಚಿತಾರ್ಥ ನಿಮಿತ್ತದ ತಾಂಬೂಲ ಮಹೋತ್ಸವ ಗಂಗಾಷ್ಟಮಿ ಅ.14 ರಂದು ಪ್ರಾತಃಕಾಲದಲ್ಲಿ ಗಂಗಾವಳಿಯ ಶ್ರೀಗಂಗಾಮಾತಾ ಮಂದಿರದಲ್ಲಿ ಶಾಸ್ತೊçÃಕ್ತವಾಗಿ ನೆರವೇರಲಿದೆ.ತನ್ನಿಮಿತ್ತ ಶ್ರೀಮಹಾಬಲೇಶ್ವರ ದೇವರ ಉತ್ಸವವು ಅ.13ರಂದು ರಾತ್ರಿ ಮಂಗಳವಾದ್ಯ ಸಹಿತ ಭವ್ಯ ಮೆರವಣಿಗೆಯಲ್ಲಿ ಸಮುದ್ರ ತೀರದ ಮಾರ್ಗದ ಮೂಲಕ ಗಂಗಾವಳಿಗೆ ಪಯಣಿಸಲಿದೆ.ಗಂಗಾವಳಿ ನದಿಯಲ್ಲಿ ಪವಿತ್ರ ಮಂಗಳಸ್ನಾನದ ತರುವಾಯ ಉತ್ಸವವು ಮಂದಿರಕ್ಕೆ ತೆರಳಿ ನಿಶ್ಚಿತಾರ್ಥ ವಿಧಿಯಲ್ಲಿ ಪಾಲ್ಗೊಳ್ಳಲಿದೆ.ತಾಂಬೂಲ ವಿನಿಮಯದ ನಂತರ ಉತ್ಸವವು ತಿರುಗಿ ಮಂದಿರಕ್ಕೆ ಆಗಮಿಸಲಿದೆ.
ಅ.13ರಂದು ಜಾತ್ರೆ:ಗಂಗಾಷ್ಟಮಿ ಉತ್ಸವದ ಪ್ರಯುಕ್ತ ಅ.13ರಂದು ಶ್ರೀಗಂಗಾಮಾತಾ ಮಂದಿರ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಪೂರ್ವಾಹ್ನ ಶ್ರೀಸತ್ಯನಾರಾಯಣ ಪೂಜೆ,ಮಹಾಮಂಗಳಾರತಿ ನಡೆಯುವುದು.ಮಧ್ಯಾನ್ಹ ಮತ್ತು ರಾತ್ರಿ ಪ್ರಸಾದ ಭೋಜನ ಸಂಘಟಿಸಲಾಗಿದೆ.ಸAಜೆ 7-30ರಿಂದ ಮಹಿಳಾ ಬಳಗದಿಂದ ಭಜನೆ,ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಶ್ರೀಸತೀಶ ಹೆಮ್ಮಾಡಿ ಅವರಿಂದ ಜಾದೂ ವಿಸ್ಮಯ ಮತ್ತು ಅಂಕೋಲಾ ಬೇಲೇಕೇರಿಯ ದೃಶ್ಯಕಲಾ ಬಳಗದ ವತಿಯಿಂದ ಸಾಮಾಜಿಕ ನಾಟಕ ನಡೆಯಲಿದೆ.ಹೊನ್ನಾವರ ಕಳಸನಮೂಟೆಯ ಅಂಬಿಗ ಸಮಾಜದ ವತಿಯಿಂದ ಚಂಡೆವಾದ್ಯ ಮತ್ತು ಪ್ರಸಾದ ಭೋಜನ ಸೇವೆ,ಪುರುಷೋತ್ತಮ ಡಿ.ಕಲ್ಮನೆ ಅವರಿಂದ ಹೂವಿನ ಅಲಂಕಾರ ಸೇವೆ ಆಯೋಜಿತವಾಗಿದೆ.ಗಂಗಾಷ್ಟಮಿ ಹಬ್ಬದ ನಿಮಿತ್ತ ಗಂಗಾವಳಿಯಲ್ಲಿ ಅಹೋರಾತ್ರಿ ನಡೆಯುವ ಉತ್ಸವ ಮತ್ತು ಜಾತ್ರೆಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಯ ಅಪಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃತಾರ್ಥರಾಗುವಂತೆ ಗಂಗಾವಳಿಯ ಶ್ರೀಗಂಗಾಮಾತಾ ಮಂದಿರದ ಆಡಳಿತ ಸಮಿತಿ,ಯಜಮಾನರುಗಳು ಮತ್ತು ಹದಿನೆಂಟು ಹಳ್ಳಿಗಳ ಸಮಸ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.