ಬೆಳಂಜೆಯಲ್ಲಿ ಶಿವ ಫ್ರೆಂಡ್ಸ್ ಕ್ರಿಕೆಟ್ ಟೂರ್ನಿ

shiva
Published on

ಹೆಬ್ರಿ: ಕುಚ್ಚೂರು ಬೆಳಂಜೆ ಶಿವ ಫ್ರೆಂಡ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ಜಾರ್ಮಕ್ಕಿಯಲ್ಲಿ ಭಾನುವಾರ ನಡೆದ ಶಿವ ಫ್ರೆಂಡ್ಸ್ ಟ್ರೋಫಿಯನ್ನು ಉದ್ಯಮಿ ಪ್ರವೀಣ್ ಬಲ್ಲಾಳ್ ಉದ್ಘಾಟಿಸಿದರು. ರಾಜ್ಯಮಟ್ಟದ ಕ್ರೀಡಾಪಟು ಕೃತಿಕಾ ಅವರನ್ನು ಸನ್ಮಾನಿಸಲಾಯಿತು.

ಕುಚ್ಚೂರು ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಸದಸ್ಯ ಸತೀಶ್ ಪೂಜಾರಿ ಬೈಲುಮನೆ, ಉದ್ಯಮಿ ಕಿರಣ್ ತೋಳಾರ್ ಕುಚ್ಚೂರು, ಶಿವ ಫ್ರೆಂಡ್ಸ್ ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷ ಅಖಿಲೇಶ್, ಪ್ರಮುಖರಾದ ರಮೇಶ್ ಪೂಜಾರಿ, ಮಂಜು ಪೂಜಾರಿ ಜಾರ್ಮಕ್ಕಿ, ಸುರೇಶ್ ಪೂಜಾರಿ, ಶರತ್, ಶಿವ ಫ್ರೆಂಡ್ಸ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net