ಹಿತ ಚಿಂತನೆ ಪಸರಿಸುವ ಶಿವಾನುಭವ

20 SHIGLI
Published on

ಶಿಗ್ಲಿ; ಗ್ರಾಮದಲ್ಲಿ ಸೋಮವಾರ ನೂಲುಹುಣ್ಣಿಮೆ ನಿಮಿತ್ತ 340ನೇ ಶಿವಾನುಭವಗೋಷ್ಠಿ ಹಾಗೂ ಸೇವಾ ಮಂದಿರದ ಬಸವಕುಮಾರ ಮುಳಗುಂದಮಠ ಅಜ್ಜನವರ 28ನೇ ಪುಣ್ಯಾರಾಧನೆ ಹಮ್ಮಿಕೂಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕುಮಾರ ಅಜ್ಜನವರ ಗದ್ದುಗೆಗೆ ಪೂಜೆ, ಪ್ರವಚನ, ಪ್ರಾರ್ಥನೆ, ವಚನಗಾಯನ, ನಂತರ ಪ್ರಸಾದ ವಿನಿಮಯ ನಡೆಯಿತು.
ಡಾ. ನೀಲಗಿರಿ ತಳವಾರ ಮಾತನಾಡಿ, ಮನುಷ್ಯದೇಹ ಶುದ್ಧಿಗಾಗಿ ವಿವಿಧ ಸೋಪು, ಶ್ಯಾಂಪೂಗಳನ್ನು ಉಪಯೋಗಿಸಿ ನಮ್ಮ ಮೈ ತೊಳೆದುಕೊಳ್ಳುತ್ತೇವೆ. ಆದರೆ ಮನಸು ಪ್ರತಿ ಕ್ಷಣವು ಮೈಲಿಗೆಯಾಗುತ್ತದೆ. ಹಾಗಾಗಿ ಮನುಷ್ಯನ ಮನ ಶುದ್ಧಿಗಾಗಿ ಸಮಾನ ಮನಸ್ಕರು ಒಂದೆಡೆ ಸೇರಿ ಸತ್ಸಂಗ ಬಳಗವನ್ನಾಗಿಸಿಕೊಂಡು ಮನಸಮಾಜದ ಹಿತಚಿಂತನೆಗಳನ್ನು ಅರಿಯುವುದೇ ಶಿವಾನುಭವಗೋಷ್ಠಿಯಾಗಿದೆ ಎಂದರು. ಇಷ್ಟಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಅಧ್ಯಕ್ಷತೆಯನ್ನು ಸೋಮಣ್ಣಾ ಡಾಣಗಲ್ಲ ವಹಿಸಿದ್ದರು, ಎನ್.ಎ. ಮುಳಗುಂದಮಠ, ಎಸ್.ಪಿ. ಬಳಿಗಾರ, ಕಸ್ತೂರಮ್ಮ ಹಿರೇಮಠ, ರತ್ನಮ್ಮ ಆರ್.ಎಚ್. ಶಿವಯೂಗಿ ಎಂ., ಈರಣ್ಣ ಎಂ, ಕಲ್ಲೇಶಪ್ಪ ಮನಗೂಳಿ, ಶಂಕ್ರಪ್ಪ ರಜಪೂತ, ಬೈರಪ್ಪ ಕೋಪರ್ಡೆ, ಸೋಮಣ್ಣ ಹರ್ತಿ, ಈರಣ್ಣಾ ಗಂಜಿ, ಪದ್ಮರಾಜ ಪಾಟೀಲ, ರಾಮನಗೌಡ ಪಿ., ಲಕ್ಷ್ಮಣ ಮೆಳ್ಳಿಗಟ್ಟಿ, ಗುಕ್ಕ ಪಶುಪತಿಹಾಳ, ಸತ್ಯಪ್ಪ ಡಂಬಳ, ಸಿ.ಆರ್. ಗೋಕಾವಿ, ಆರ್.ಎಂ. ಹೊನಕೇರಿ, ವೀರಣ್ಣ ಪವಾಡದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net