ಮಲಯಾಳಂನಲ್ಲಿ ಶಿವದೂತೆ ಗುಳಿಗೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಮಾಹಿತಿ

nataka
ಸಾಂಸ್ಕೃತಿಕ ರಂಗದಿಬ್ಬಣಕ್ಕೆ ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಚಾಲನೆ ನೀಡಿದರು.ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್,ರಂಗಕರ್ಮಿ ಕಾಸರಗೋಡು ಚಿನ್ನಾ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್.ಆರ್. ಮೊದಲಾದವರಿದ್ದರು.
Published on

ಮಂಗಳೂರು : ರಂಗಸ್ಪಂದನ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪುರಭವನದಲ್ಲಿ ನಡೆದ ಸಾಂಸ್ಕೃತಿಕ ರಂಗದಿಬ್ಬಣ ಕಾರ್ಯಕ್ರಮಕ್ಕೆ ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಚಾಲನೆ ನೀಡಿದರು.ಬಳಿಕ ಶಿವದೂತೆ ಗುಳಿಗೆ ಪೌರಾಣಿಕ ತುಳು ನಾಟಕ ಪ್ರದರ್ಶನಗೊಂಡಿತು.

ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಮಾತನಾಡಿ‘ ದೇಶದ ವಿವಿಧ ಕಡೆಗಳಲ್ಲಿ ಸಂಚಲನ ಸೃಷ್ಟಿಸಿದ ತುಳು ನಾಟಕ ಶಿವದೂತೆ ಗುಳಿಗೆ ಸದ್ಯದಲ್ಲೇ ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶನ ಕಾಣಲಿದೆ.ನಾಟಕದ ಮಲಯಾಳಂ ಆವೃತ್ತಿ ದುಬೈ, ನಂತರ ಪಾಲಕ್ಕಾಡ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ರಂಗಕರ್ಮಿ ಕಾಸರಗೋಡು ಚಿನ್ನಾ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್.ಆರ್., ಡಾ. ಶಿವಚರಣ್‌ಶೆಟ್ಟಿ, ಎಸಿಪಿ ಮಹೇಶ್, ಕೇರಳ ಸಮಾಜಂನ ಟಿ.ಕೆ.ರಾಜು, ನಾ. ದಾ. ಶೆಟ್ಟಿ , ರಂಗಸ್ಪಂದನದ ಸಂಚಾಲಕ ವಿ.ಜಿ.ಪಾಲ್ ಉಪಸ್ಥಿತರಿದ್ದರು. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net