ಶಿವಶರಣರು ದೇಶಕ್ಕೆ ಮಾದರಿ

Nuliya Chandayya Birth aniversry
Published on

ನವಲಗುಂದ: ಬಸವ ತತ್ವವನ್ನು ಅಳವಡಿಕೊಂಡು ಹನ್ನೆರಡನೇ ಶತಮಾನದಲ್ಲಿ ಕಾಯಕ ವರ್ಗದಿಂದ ಬಂದ ಎಲ್ಲರೂ ಶಿವಶರಣರಾಗಿ ನಮ್ಮ ದೇಶಕ್ಕೆ ಮಾದರಿಯಾಗಿದ್ದರು ಎಂದು ಡಾ. ಸಿದ್ದಲಿಂಗೇಶ ಹಂಡಗಿ ಸ್ಮರಿಸಿಕೊಂಡರು.

ಪಟ್ಟಣದ ಸರ್ಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶಿಕ್ಷಕ ನೀಲಯ್ಯ ತಾಳಿಕೋಟಿಮಠ ಮಾತನಾಡಿ, ನುಲಿಯ ಚಂದಯ್ಯನವರು ತಮ್ಮ ವಚನಗಳಲ್ಲಿ ನೇರ ನಿಷ್ಠುರವಾಗಿ ವಿಚಾರಗಳನ್ನು ಹೇಳಿ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.

ಪ್ರಧಾನ ಗುರುಗಳಾದ ಶಿವಾನಂದ ಬೆಂಚಿಕೇರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರುಮಾತೆ ರೇಣುಕಾ ಹಾಲಿಗೇರಿ, ಸರಸ್ವತಿ ಸುಣಗಾರ, ಹಸೀನಮಾ ಬೈರೆಕದಾರ, ದೇವರಡ್ಡಿ ಮಳಲಿ, ಇಮಾಮಸಾಬ್ ರಾಜೇಖಾನವರ ಉಡಚಮ್ಮ ಭೋವಿ, ಸರೋಜ ಅಂಬಿಗೇರ, ಶಶಿಕಲಾ ಸವಣೂರ, ಮಂಜುಳಾ ಭೋವಿ ಮತ್ತಿತರರು ಇದ್ದರು. ಶಿಕ್ಷಕ ಶ್ರೀನಿವಾಸ ನವೀಂದ್ರಕರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ರಾಜೇಶ್ವರಿ ಅಣ್ಣಿಗೇರಿ ವಂದಿಸಿದರು.

ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶಿವಶರಣ ನೂಲಿಯ ಚಂದಯ್ಯನವರ ವಚನಗಳ ಸಾಮೂಹಿಕ ಪಠಣ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net