

ಬದಿಯಡ್ಕ: ಶಿವರಾತ್ರಿ ಶುಭದಿನದಂದು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಜೀರ್ಣೋದ್ಧಾರ ಮಾತೃ ಸಮಿತಿ ನೇತೃತ್ವದಲ್ಲಿ ಶಿವಪಂಚಾಕ್ಷರಿ ಜಪಲಿಪಿ ಅಭಿಯಾನ ಪುಸ್ತಕ ಬಿಡುಗಡೆ ಸಮಾರಂಭ ಬುಧವಾರ ಶ್ರೀ ಉದನೇಶ್ವರ ಸಭಾಭವನದಲ್ಲಿ ಜರುಗಿತು.
ಮಾತೃಸಮಿತಿ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಬಿಂದು ಜಯದಾಸ್ ಪುಸ್ತಕ ಬಿಡುಗಡೆಗೊಳಿಸಿದರು. ಡಾ.ಕವಿತಾ ಶೆಟ್ಟಿ ಕಂಡೆತ್ತೋಡಿ ಮಂಗಳೂರು, ಕೆನರಾ ಬ್ಯಾಂಕ್ ಉದ್ಯೋಗಿ ಪ್ರಮೀಳಾ ಕೆ.ಎನ್., ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ, ಪ್ರಧಾನ ಕಾರ್ಯದರ್ಶಿ ಪಿ.ಜಿ.ಜಗನ್ನಾಥ ರೈ, ಸಂಗೀತ ಶಾಲಾ ನಿರ್ದೇಶಕಿ ಅಶ್ವಿನಿ ರಾಜ್ ಪಟ್ಟಾಜೆ, ಮಧುಶ್ರೀ ಅಳಕ್ಕೆ ಮಾತನಾಡಿದರು. ಶ್ರೀ ಕ್ಷೇತ್ರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತೃ ಸಮಿತಿ ಉಪಾಧ್ಯಕ್ಷೆ ವಿನಯ ಜೆ.ರೈ ಪೆರಡಾಲ ಸ್ವಾಗತಿಸಿ, ಮಾತೃ ಸಮಿತಿ ಕಾರ್ಯದರ್ಶಿ ಗೀತಾ ಎಂ.ಭಟ್ ವಂದಿಸಿದರು. ಜತೆ ಕಾರ್ಯದರ್ಶಿ ಅನಿತಾ ಬದಿಯಡ್ಕ ಕಾರ್ಯಕ್ರಮ ನಿರೂಪಿಸಿದರು.