ಶಿವಬಸಪ್ಪ ಅಧ್ಯಕ್ಷ, ಭೀಮಪ್ಪ ಉಪಾಧ್ಯಕ್ಷ

web2
ಗುರ್ಲಾಪುರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಅಧ್ಯಕ್ಷರಾಗಿ ಶಿವಬಸಪ್ಪ ಇಟನಾಳ, ಉಪಾಧ್ಯಕ್ಷರಾಗಿ ಭೀಮಪ್ಪ ಮರಾಠೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಕೆಂಪಣ್ಣ ದೇವರಮನಿ, ಶಂಕರ ಮುಗಳಖೋಡ, ಬಸಪ್ಪ ಮುಗಳಖೋಡ ಇತರರಿದ್ದರು.
Published on

ಗುರ್ಲಾಪುರ: ಗುರ್ಲಾಪುರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಮುಂಬರುವ 5 ವರ್ಷದ ಅವಧಿಗಾಗಿ ಅಧ್ಯಕ್ಷರಾಗಿ ಶಿವಬಸಪ್ಪ ಇಟನಾಳ, ಉಪಾಧ್ಯಕ್ಷರಾಗಿ ಭೀಮಪ್ಪ ಮರಾಠೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಪುಂಡಲೀಕ ಮುಗಳಖೋಡ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಶಿವಬಸಪ್ಪ ಇಟನಾಳ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಭೀಮಪ್ಪ ಮರಾಠೆ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಬಿ.ಕೆ. ಗೋಖಲೆ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಶಿವಬಸಪ್ಪ ಇಟನಾಳ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು. ಸಂಘದ ಸದಸ್ಯರಾದ ಕೆಂಪಣ್ಣ ದೇವರಮನಿ, ಶಂಕರ ಮುಗಳಖೋಡ, ಬಸಪ್ಪ ಮುಗಳಖೋಡ, ಮಹಾದೇವ ಕುಲಗೋಡ, ಎಸ್.ಎಸ್. ಮುಗಳಖೋಡ, ಅಪ್ಪಯ್ಯ ಹಳ್ಳೂರ, ಮಹಾದೇವ ನಡುವಿನಕೇರಿ, ಶಿವಪ್ಪ ಟಪಾಲದಾರ, ಸಂಘದ ಕಾರ್ಯದರ್ಶಿ ಶ್ರೀಶೈಲ ಮುಗಳಖೋಡ, ಕರಿಯಪ್ಪ ಕಂಬಳಿ ಹಾಗೂ ದುಂಡಪ್ಪ ಮುಗಳಖೋಡ, ವಿ ಬಿ ಮುಗಳಖೋಡ, ಚಿದಾನಂದ ಹಿರೇಮಠ, ಸದಾಶಿವ ನೇರ್ಲಿ, ಯಲ್ಲಪ್ಪ ಸುಳ್ಳನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net