

ಉಡುಪಿ: ಸಂನ್ಯಾಸಿಗಳ ಮುಖ್ಯ ಕರ್ತವ್ಯ ದೇವರ ಆರಾಧನೆ. ಇದರೊಂದಿಗೆ ದೇವರ ಆನುಗ್ರಹಕ್ಕೆ ಪಾತ್ರರಾಗಲು ಸಮಾಜಮುಖಿ ಕೆಲಸಗಳನ್ನೂ ನಡೆಸಬೇಕು. ಹೀಗಾಗಿ ಸಮಾಜಕ್ಕೂ ಸಂನ್ಯಾಸಿಗಳಿಗೂ ಅವಿನಾಭಾವ ಸಂಬಂಧವಿರಬೇಕು ಎಂದು ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ರಥಬೀದಿಯಲ್ಲಿರುವ ಅನ್ನವಿಠ್ಠಲ ವೇದಿಕೆಯಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರ 18ನೇ ಜನ್ಮನಕ್ಷತ್ರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮಧ್ವಾಚಾರ್ಯರು ಹಾಗೂ ವಾದಿರಾಜರ ಪರಂಪರೆಯಲ್ಲಿ ಬಂದ ಕಾರಣ ನಮಗೆ ಗೌರವ ಲಭಿಸುತ್ತಿದೆ ಎಂಬ ಪ್ರಜ್ಞೆ ಸಂನ್ಯಾಸಿಗಳಿಗೆ ಇರಬೇಕು. ಜನರ ನಿರೀೆಗೆ ಸ್ಪಂದಿಸಬೇಕು. ಜನಮನ್ನಣೆ ನಮ್ಮಲ್ಲಿ ಅಹಂಭಾವ ಮತ್ತು ಅಜ್ಞಾನಕ್ಕೆ ಕಾರಣವಾಗಬಾರದು. ಇದಕ್ಕಾಗಿ ವಿದ್ಯೆ ಬೇಕು. ಶಾಸ್ತ್ರಾಧ್ಯಯನ, ತತ್ವಜ್ಞಾನದಿಂದ ಸ್ಥಿತಪ್ರಜ್ಞೆ ಬೆಳೆಯುತ್ತದೆ. ಇಲ್ಲದಿದ್ದರೆ ಅನರ್ಥಕ್ಕೆ ದಾರಿಯಾಗುತ್ತದೆ. ದೇವರ ಸಂತೋಷಕ್ಕಾಗಿ ಕೆಲಸ ಮಾಡುವವನು ಹೊಗಳಿಕೆಗೆ ಹಿಗ್ಗುವುದಿಲ್ಲ. ತೆಗಳಿಕೆಗೆ ಕುಗ್ಗುವುದಿಲ್ಲ ಎಂದು ಹೇಳಿದರು.
ಶಿರೂರು ಮಠದ ವೇದವರ್ಧನ ಶ್ರೀಪಾದರು ಸಾನ್ನಿಧ್ಯ ವಹಿಸಿ, ಲಕ್ಷಿ$್ಮವರರು ಕಾಲವಾದ ನಂತರ 3 ವರ್ಷ ಪೀಠ ಖಾಲಿ ಇತ್ತು. ಈ ಸಂದರ್ಭದಲ್ಲಿ ಮಠ ಹಾಗೂ ಭಕ್ತರ ನಡುವೆ ಸಂಪರ್ಕ ಕಡಿತವಾಗಿತ್ತು. ಅದನ್ನು ಮತ್ತೆ ಬೆಸೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಧರ್ಮ ಉಳಿಯಬೇಕಾದರೆ ಧರ್ಮವನ್ನು ರಸಬೇಕು. ಇದಕ್ಕಾಗಿ ಮಠ ಹಾಗೂ ಸಮಾಜ ಜೊತೆಯಲ್ಲಿರಬೇಕು. ಬಾಂಧವ್ಯ ಬೆಳೆಯಬೇಕು ಎಂದರು.
ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರುರಾಜ್ ಗಂಟಿಹೊಳೆ, ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಕೆ.ಕೃಷ್ಣಮೂರ್ತಿ ಆಚಾರ್ಯ, ಕಟೀಲು ಲಕ್ಷಿ$್ಮನಾರಾಯಣ ಆಸ್ರಣ್ಣ , ವಿಹಿಂಪ ದಣ ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಮಠದ ದಿವಾನ್ ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಪ್ರಸ್ತಾವನೆಗೈದರು. ಪ್ರಾಧ್ಯಾಪಕ ಅಶ್ವತ್ಥ್ ಭಾರಧ್ವಾಜ್ ಕಾರ್ಯಕ್ರಮ ನಿರೂಪಿಸಿದರು.