

ಬೈಂದೂರು: ಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಪೇಟೆ) ಹಳೇ ವಿದ್ಯಾರ್ಥಿ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿರೂರು ಪ್ರಸಾದ ಪ್ರಭು ಆಯ್ಕೆಯಾದರು. ಗೌರವಾಕ್ಷರಾಗಿ ರವೀಂದ್ರ ಶೆಟ್ಟಿ ಆರ‌್ಮಕ್ಕಿ, ಉಪಾಧ್ಯಕ್ಷರಾಗಿ ಜ್ಯೋತಿ ಶೆಟ್ಟಿ, ಕಾರ್ಯದರ್ಶಿಯಾಗಿ ನಯನಾ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಅವಿನಾಶ್ ಪ್ರಭು, ಕೋಶಾಧಿಕಾರಿಯಾಗಿ ಕುಶಲ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ರವೀಂದ್ರ ಶೆಟ್ಟಿ ಹೊನ್ಕೇರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾರದಾ, ಫರೀದಾ ಬೇಗಂ, ಸಾಯಿನಾಥ್, ಶಾಲಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.