

ಸಿಂಧನೂರು: ಉಡುಪಿ ಶಿರೂರು ಮಠದ ವೇದವರ್ಧನ ಶ್ರೀಪಾದಂಗಳವರನ್ನು ಬುಧವಾರ ಸಂಜೆ ಹಳೇ ಬಜಾರಿನ ಕಾಡ ಮಾರುತಿ ದೇವಸ್ಥಾನದಿಂದ ಶ್ರೀರಾಮ ಮಂದಿರದವರೆಗೆ ಅದ್ದೂರಿ ಶೋಭಾಯಾತ್ರೆ ನಡೆಸಿ ಸ್ವಾಗತಿಸಲಾಯಿತು.
ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿಗಳ ಭಜನೆ, ಪಟಾಕಿಗಳ ಸದ್ದು ಸಾರ್ವಜನಿಕರನ್ನು ಆಕರ್ಷಿಸಿತು. ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಅ.9ರಂದು ಮನೆ-ಮನೆಗೆ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ನಂತರ ಸಂಸ್ಥಾನ ಪೂಜೆ, ತೀರ್ಥ ಪ್ರಸಾದ ಜರುಗಿದವು.
ಅ.11ರಂದು ಖ್ಯಾತ ಪ್ರವಚನಕಾರ ಬೆಂಗಳೂರಿನ ಬ್ರಹ ್ಮಣ್ಯಾಚಾರ್ ಅವರಿಂದ ಸುಂದರಕಾಂಡ ರಾಮಾಯಣ ಪ್ರವಚನ ನಡೆಯಲಿದೆ. ಶೋಭಾಯಾತ್ರೆಯಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ಗೋವಿಂದರಾವ್ ಮಠಾಧಿಕಾರಿ ನರಸಿಂಹಾಚಾರ್ ಪುರೋಹಿತ, ಪಂ.ರಾಮಕೃಷ್ಣಾಚಾರ್ ಗೋನ್ವಾರ, ವೆಂಕಣ್ಣಾಚಾರ್ ದೋಟಿಹಾಳ, ಮಧ್ವಾರಾಜ ಆಚಾರ್ಯ, ಶಶಿಕಾಂತಾಚಾರ್, ರಂಗನಾಥಾಚಾರ್ ಸಾಲಗುಂದಾ, ವೆಂಕಟೇಶಾಚಾರ್ ಕೆಂಗಲ್, ಕೃಷ್ಣ ಮಲಕಸಮುದ್ರ, ಜಯತೀರ್ಥದಾಸ, ನಾಗೇಂದ್ರ ಕುಮಾರ ಸಾಹುಕಾರ, ಹನುಮಂತಾಚಾರ್ ಮಸ್ಕಿ, ಪ್ರಹ್ಲಾದಗುಡಿ, ಸುಧೀಂದ್ರ ಕುಲಕರ್ಣಿ, ಶೇಷಶಯನ, ಪ್ರಸನ್ನ ಅಲಬನೂರು ಇತರರಿದ್ದರು.