ಡಿ. 6ಕ್ಕೆ ಶೀರೂರು ಮಠ ಬಾಳೆ ಮೂಹೂರ್ತ

udp-2-shirooru
Published on

ಉಡುಪಿ: ಮನ್ಮಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀವಾಮನತೀರ್ಥ ಪರಂಪರೆಯ ಉಡುಪಿ ಶೀರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಶ್ರೀ ಕೃಷ್ಣಪೂಜಾ ಪರ್ಯಾಯದ ಮೊದಲ ಮುಹೂರ್ತ "ಬಾಳೆ ಮುಹೂರ್ತ' ಡಿ. 6ರಂದು ಬೆಳಗ್ಗೆ 7 ಗಂಟೆಗೆ ಪೂರ್ಣ ಪ್ರಜ್ಞ ಕಾಲೇಜಿನ ಹಿಂಭಾಗದ ಶ್ರೀ ಶೀರೂರು ಮಠದ ತೋಟದಲ್ಲಿ ನಡೆಯಲಿದೆ ಎಂದು ಮಠದ ದಿವಾನ್​ ಉದಯ ಕುಮಾರ್​ ಸರಳತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 6 ರಥಬೀದಿಯ ಶೀರೂರು ಮಠದಿಂದ ಭಜನೆ, ಚೆಂಡೆ, ಬಿರುದಾವಳಿಗಳ ಮೂಲಕ ಅಬ್ಜಾರಣ್ಯ ಪ್ರದೇಶಕ್ಕೆ ತೆರಳಿ 1 ಸಾವಿರಕ್ಕೂ ಬಾಳೆ ಗಿಡಗಳನ್ನು ನೆಡಲಾಗುವುದು. ಸುಮಾರು 1 ಎಕ್ರೆ ಪ್ರದೇಶದಲ್ಲಿ ಈಗಾಗಲೇ ನೆಲ ಸಮತಟ್ಟು ಮಾಡುವ ಕಾರ್ಯ ನಡೆದಿದ್ದು, ಎಲ್ಲಾ ಭಕ್ತರಿಗೂ ಬಾಳೆ ಗಿಡಗಳನ್ನು ನೆಡಲು ಅವಕಾಶವಿದೆ. ಪರ್ಯಾಯಕ್ಕಾಗಿ ಶಿರೂರು ಮೂಲ ಮಠದಲ್ಲಿ 14 ಸಾವಿರ ಬಾಳೆ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಂದು ಹೇಳಿದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಪರ್ಯಾಯ ಅಂಗವಾಗಿ ಡಿ.14 ಮತ್ತು 15ರಂದು ಶಿರೂರು ಮೂಲಮಠದಲ್ಲಿ ರಾಮತಾರಕ ಮಂತ್ರ ಯಜ್ಞ ಹಮ್ಮಿಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಮಠದ ಪಾರುಪತ್ಯಗಾರ ಶ್ರೀಶ ಭಟ್​ ಕಡೆಕಾರ್​, ಪ್ರಮುಖರಾದ ಮೋಹನ್​ ಭಟ್​, ಶ್ರೀಶ ನಾಯಕ್​, ವಾಸುದೇವ ಆಚಾರ್ಯ, ಗೋವಿಂದ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net