ಗೋಕರ್ಣದಲ್ಲಿ ಸಿಕ್ಕ ಶವ ಸಣ್ಣಿ ಗೌಡಳದ್ದೇ...?

Shirur landslide update
Published on

ಕಾರವಾರ: ಗೋಕರ್ಣ ಸಮೀಪದ ಸಮುದ್ರ ತೀರದಲ್ಲಿ ಮಹಿಳೆಯ ಶವ ಮಂಗಳವಾರ ಪತ್ತೆಯಾಗಿದೆ. ಶವ ಸಂಪೂರ್ಣ ಕೊಳೆತಿದ್ದು, ಮುಖ ನೋಡಿ ಗುರುತು ಹಿಡಿಯುವಂತಿಲ್ಲ

ಅಂಕೋಲಾ ಶಿರೂಗು ಗುಡ್ಡ ಕುಸಿತದ ಪರಿಣಾಮ ಉಳುವರೆ ಗ್ರಾಮದಲ್ಲಿ ಉಂಟಾಸ ಸುನಾಮಿಯಿಂದ ನಾಪತ್ತೆಯಾಗಿದ್ದ ಸಣ್ಣಿ ಹನುಮಂತ ಗೌಡ ಶವ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.ಶವದ ಗುರುತು ಶೀಘ್ರ ತಿಳಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.‌

ಇನ್ನೊಂದೆಡೆ ನಾಪತ್ತೆಯಾದ ಇನ್ನೂ ಮೂವರ ದೇಹ ಹುಡುಕಾಟಕ್ಕೆ ಭಾರತೀಯ ಸೇನೆ ನದಿಯ ನಡುವೆ ಕಾರ್ಯಾಚರಣೆಗೆ ಇಳಿದಿದೆ.

ಜು.16 ರಂದು ಗುಡ್ಡ ಕುಸಿತ‌ ಸಂಭವಿಸಿದ್ದು, 11 ಜನ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ. ಇದುವರೆಗೆ 8 ಶವಗಳು ಪತ್ತೆಯಾಗಿವೆ. ಎರಡು ಶವಗಳ ಗುರುತು ಪತ್ತೆಯಾಗಬೇಕಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net