

ಕಾರವಾರ: ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಸಿಲಕಿರಬಹುದಾದ ಮೂವರ ಮೃತ ದೇಹಗಳು, ಲಾರಿ ಹಾಗೂ ಇತರ ಅವಶೇಷಗಳನ್ನು ತೆರವು ಮಾಡಲು ಆಗಸ್ಟ್ 3 ಹಾಗೂ 4 ರಂದು ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಲಾಗಿದೆ.
ಆಗಸ್ಟ್ 4 ರಂದು ಅಮಾವಾಸ್ಯೆ ಇದ್ದು, ಸಮುದ್ರದ ಉಬ್ಬರ, ಇಳಿತದ ಪರಿಣಾಮ ಗಂಗಾವಳಿ ನೀರಿನ ಹರಿವು ನಿಧಾನವಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೇರಳದಿಂದ ಡ್ರಜ್ಜಿಂಗ್ ಯಂತ್ರ ತಂದು ಕಾರ್ಯಾಚರಿಸಲು ಯೋಜಿಸಲಾಗಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಅಲ್ಲಿ ಲಾರಿ, ಮೃತ ದೇಹಗಳು ಇರುವ ಸಾಧ್ಯತೆ ಇದೆ. ಅಪಾರ ಕಲ್ಲು, ಮಣ್ಣು, ಮರದ ಸೇರಿಕೊಂಡು ನೀರಿನ ಹರಿವಿಗೆ ಅಡಚಣೆಯಾಗಿದೆ. ಅವಶೇಷಗಳನ್ನು ತೆಗೆಯುವ ಜತೆಗೆ ನೀರಿನ ಹರಿವಿಗೆ ಅನುಕೂಲ ಮಾಡಿಕೊಡುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಸೈಲ್ ತಿಳಿಸಿದರು.
ತಂಡ ಭೇಟಿ:
ಕೇರಳ ರಾಜ್ಯದ ಸೂಚನೆಯಂತೆ ಅಲ್ಲಿನ ತ್ರಿಶೂರ್ ನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿಬಿನ್ ಸಿ. ಹಾಗೂ ಪ್ರದೀಶ್ ಅವರು ಡ್ರಜ್ಜಿಂಗ್ ಯಂತ್ರದ ತಯಾರಕ, ಆಪರೇಟರ್ ನಿತಿನ್ ಅವರೊಂದಿಗೆ ಆಗಮಿಸಿ ಗಂಗಾವಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ತ್ರಿಶೂರ್ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ನಾವು ಆಗಮಿಸಿದ್ದು, ಅವರಿಗೆ ಹಾಗೂ, ಸರ್ಕಾರಕ್ಕೆ ವರದಿ ನೀಡಲಾಗುವುದು. ಅಲ್ಲಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ, ಯಂತ್ರ ತರುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿನ್ನೀರು ಪ್ರದೇಶದಲ್ಲಿ ಹೂಳು ತೆಗೆಯಬಹುದಾದ ಅಗ್ರೋ ಡೆಡ್ಸ್ ಕ್ರಾಫ್ಟ್ ಎಂಬ ನೀರಿನಲ್ಲಿ ಹೂಳೆತ್ತುವ ಯಂತ್ರವನ್ನು ನಿತಿನ್ ಅಭಿವೃದ್ಧಿ ಮಾಡಿದ್ದಾರೆ. ಆರು ಮೀಟರ್ ಆಳದ ನೀರಿನಲ್ಲಿ ಯಂತ್ರವು ತನ್ನ ಕಾಲು ಊರಿ ನಿಲ್ಲಲಿದೆ. ಹಗ್ಗ ಕಟ್ಟಿ ಯಂತ್ರವನ್ನು ನಿಲ್ಲಿಸಿಕೊಡುವುದಾವಿ ಎನ್ ಡಿಆರ್ ಎಫ್ ತಂಡ ತಿಳಿಸಿದೆ. ಇದರಿಂದ ಉಕ ಜಿಲ್ಲಾಡಳಿತ ಒಪ್ಪಿದರೆ, ಕಾರ್ಯಾಚರಣೆ ಮಾಡಲು ಸಿದ್ಧರಿದ್ದೇವೆ ಎಂದು ಕೇರಳ ಕೃಷಿ ಅಧಿಕಾರಿ ಬಿಬಿನ್ ಸಿ. ತಿಳಿಸಿದರು. ಸ್ಥಳೀಯ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳದ ಅರ್ಜುನ್ ಪತ್ತೆಗೆ ನಾನು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಇನ್ನೂ ಮುಂದೆಯೂ ನನ್ನ ಪರಿಪೂರ್ಣ ಶಕ್ತಿಯನ್ನು ವ್ಯಯ ಮಾಡಲು ಸಿದ್ದನಿದ್ದೇನೆ. ಸ್ಥಳೀಯರಿಬ್ಬರ ಮನೆಗೆ ತೆರಳಿ ನಾನು ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದೇನೆ.ಈಶ್ವರ ಮಲ್ಪೆಮುಳುಗು ತಜ್ಞ