ಉತ್ತರಾಖಂಡದಲ್ಲಿ ಶಿರಸಿಯ ಯುವತಿ ಸಾವು

padmini-hegde
Published on

ಶಿರಸಿ: ಉತ್ತರಖಂಡದಲ್ಲಿ ಮಂಗಳವಾರ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ಹಿಮಪಾತದಲ್ಲಿ ತಾಲೂಕಿನ ಜಾಗನಳ್ಳಿ ಯುವತಿ ಸಿಲುಕಿ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಆತಂಕ ಮೂಡಿಸಿದೆ.
ಸಾಮಾಜಿಕ ಜಾಲ ತಾಣ ಮತ್ತು ಮಾಧ್ಯಮದಲ್ಲಿ ಉತ್ತರಖಂಡದ ಹಿಮಪಾತ ಘಟನೆಗಳ ಕುರಿತು ವರದಿಯಾಗಿದೆ. ಇದರಲ್ಲಿ ಮೃತರ ಪಟ್ಟಿಯಲ್ಲಿ ಪದ್ಮಿನಿ ಹೆಗಡೆ ಅವರ ಹೆಸರೂ ಇದೆ. ಆದರೆ, ಹುಟ್ಟೂರಿನ ಜಾಗನಳ್ಳಿಯಲ್ಲಿ ಈ ಘಟನೆಯ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಲಭ್ಯವಾಗದೇ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪದ್ಮಿನಿ ಟ್ರಕಿಂಗ್‌ ಹವ್ಯಾಸ ಹೊಂದಿದವಳಾಗಿದ್ದಾಳೆ. ಅವರ ತಾಯಿ ಶೈಲಜಾ ಮತ್ತು ಸಹೋದರಿ ಮುಂಬೈನಲ್ಲಿ ವಾಸವಾಗಿದ್ದಾರೆ. ರಜಾ ದಿನಗಳಲ್ಲಿ, ಹವ್ಯಾಸಕ್ಕಾಗಿ ತಂಡದೊಂದಿಗೆ ಟ್ರಕಿಂಗ್‌ ಮಾಡುತ್ತಿದ್ದ ಪದ್ಮಿನಿ, ಬೆಂಗಳೂರಿನ ಮೌಂಟೇನಿಯರಿಂಗ್‌ ಫೌಂಡೇಶನ್‌ ಮೇ 29 ರಿಂದ ಜೂ.7ರವರೆಗೆ ಆಯೋಜಿಸಿದ್ದ ಭಟವಾಡಿ ಮಲ್ಲಾ ಕುಶಕಲ್ಯಾಣ ಸಹಸ್ತ್ರತಾಲ್‌ ಟ್ರಕಿಂಗ್‌ ನಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ರಾಜ್ಯದ 17 ಜನ ಸಹ ತೆರಳಿದ್ದರು ಎನ್ನಲಾಗಿದೆ.ಚಾರಣಕ್ಕೆ ತೆರಳುವ ಬಗ್ಗೆ ಕುಟುಂಬದ ಸದಸ್ಯರಿಗೂ ಪದ್ಮಿನಿ ಹೆಗಡೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net