ಶಿರಸಿ ಟಿಎಸ್‌ಎಸ್ ಸಭೆ

Published on

ಶಿರಸಿ: ನಗರದ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್) ಸರ್ವಸಾಧಾರಣ ಸಭೆಯನ್ನು ಸೆ.24ರಂದು ಬೆಳಗ್ಗೆ 10 ಗಂಟೆಗೆ ಸೊಸೈಟಿ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 84.15ಲಕ್ಷ ರೂ. ಲಾಭ ಗಳಿಸಿದೆ. ಸಂಘವು 28,06,400ರೂ. ಷೇರು ಬಂಡವಾಳ ಹೊಂದಿದೆ. ಸದಸ್ಯರ ಠೇವು 525.70 ಕೋಟಿ ರೂ. ಗಳಷ್ಟಿದೆ. ಒಕ್ಕಲುತನ ಹುಟ್ಟುವಳಿಗಳಾದ ಅಡಕೆ, ಕಾಳುಮೆಣಸು, ಹಸಿ ಅಡಕೆ, ತೆಂಗಿನಕಾಯಿ, ಯಾಲಕ್ಕಿ, ಬಾಳೆಕಾಯಿಗಳನ್ನು ಸಂಸ್ಥೆ ಮಾರಾಟ ಮಾಡಿದ್ದು, 977.41 ಕೋಟಿ ರೂ. ವಹಿವಾಟು ನಡೆದಿದೆ. ಸಂಘದ ಎಲ್ಲ ಶಾಖೆಗಳೂ ಸೇರಿ ಮಾರುಕಟ್ಟೆಯ ವಿಕ್ರಿಯಲ್ಲಿ ಸಂಘವು ಸರಾಸರಿ ಶೇ. 55.74 ಪಾಲನ್ನು ಹೊಂದಿ, 11.52 ಕೋಟಿ ರೂ. ದಲಾಲಿ ಗಳಿಸಿದೆ.

ಪ್ರಧಾನ ಕಚೇರಿ ಸೇರಿದಂತೆ ಎಲ್ಲ ಶಾಖೆಗಳಿಂದ 362.37 ಕೋಟಿ ರೂ. ಮೌಲ್ಯದ 89,979 ಕ್ವಿಂಟಾಲ್ ಅಡಕೆ, 4,65,06,241ರೂ. ಮೌಲ್ಯದ 835 ಕ್ವಿಂಟಾಲ್ ಕಾಳುಮೆಣಸು ಹಾಗೂ 4,97,967 ರೂ.ಮೌಲ್ಯದ 7 ಕ್ವಿಂ. ಏಲಕ್ಕಿಯನ್ನು ಖರೀದಿಸಿದೆ. ಸಂಘವು ಸದಸ್ಯರ ಕಲ್ಯಾಣಾರ್ಥವಾಗಿ ಸುಮಾರು 10 ಕೋಟಿ ರೂ.ಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ವಿನಿಯೋಗಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net