

ಶಿರೋಳ: ಗ್ರಾಮದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ, ರಥೋತ್ಸವ, ರೊಟ್ಟಿ ಜಾತ್ರೆ, ಲಘುರಥೋತ್ಸವ, ಜಾನುವಾರು ಪ್ರದರ್ಶನ ಫೆ. 2ರಿಂದ 4ರವರೆಗೆ ಜರುಗಲಿದೆ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಶಿರೋಳ ಗುರುಬಸವ ಸ್ವಾಮೀಜಿ ಸಮ್ಮುಖ ವಹಿಸುವರು.
ಫೆ. 2ರಂದು ಬೆಳಗ್ಗೆ 10.30ಕ್ಕೆ ನರಗುಂದ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ವತಿಯಿಂದ ಕೃಷಿ ಪಾತ್ಯಕ್ಷಿಕೆ, 11ಕ್ಕೆ ಗ್ರಾಮೀಣ ಕ್ರೀಡೆ, ಕುಸ್ತಿ ಸ್ಪರ್ಧೆ ನಡೆಯಲಿದೆ. ಶಂಕರ ಕಳಗಣ್ಣವರ, ಜಿಲ್ಲಾ ಕುಸ್ತಿ ತರಬೇತುದಾರ ಶರಣಗೌಡ ಬೆಲೇರಿ ಅತಿಥಿಗಳಾಗಿ ಆಗಮಿಸುವರು. ಸಂಜೆ 5ಕ್ಕೆ ಮಹಾರಥೋತ್ಸವ, 7 ಗಂಟೆಗೆ ಪ್ರಭಾಕರ ಉಳ್ಳಾಗಡ್ಡಿ ಅವರ ಶ್ರೀ ನಾಗಲಿಂಗ ಸ್ವಾಮೀಜಿ ಚರಿತಾಮೃತ ಪ್ರವಚನ ಮಂಗಲೋತ್ಸವ ನಡೆಯಲಿದೆ. ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಅವರಾದಿಯ ಓಂ ಶಿವ ಡೊಳ್ಳಿನ ಮೇಳದಿಂದ ತತ್ವ ಪದಗಳು, ಬಸವರಾಜ ಬೀರನೂರ, ಗುರುಪಾದಪ್ಪ ಭಜಂತ್ರಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಲಿದೆ.
ಫೆ. 3ರಂದು ಬೆಳಗ್ಗೆ 10ಕ್ಕೆ ಶಿರೋಳ ಔಷಧ ವರ್ತಕರ ಸಹಯೋಗದಲ್ಲಿ ರಕ್ತದಾನ ಶಿಬಿರ, 11ಕ್ಕೆ ಕಣ್ಣಿನ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ, ಸಂಜೆ 5ಕ್ಕೆ ಮಹಾಪೂಜೆ (ಜಂಗಮೋತ್ಸವ) ಜರುಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು. ಸಂಜೆ ರೊಟ್ಟಿ ಜಾತ್ರೆ ನಡೆಯಲಿದೆ.
ಫೆ.4ರಂದು ಬೆಳಗ್ಗೆ 10ಕ್ಕೆ ಜಾನುವಾರು ಪ್ರದರ್ಶನ 11ಕ್ಕೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವುದು, ಸಂಜೆ 4ಕ್ಕೆ ಸಕಲ ವಾದ್ಯ ಮೇಳಗಳೊಂದಿಗೆ ಲಘು ರಥೋತ್ಸವ, ಸಂಜೆ 7ಕ್ಕೆ ಬಾದಾಮಿ ನವಗ್ರಹ ಹಿರೇಮಠ ಶಿವಪೂಜಾ ಶಿವಾಚಾರ್ಯರು, ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ, ಗದಗ ಅಖಿಲ ಭಾರತ ತೆರಿಗೆ ಸಲಹಾ ಕಾರ್ಯದರ್ಶಿ ಬಸವರಾಜ ಶೆಲ್ಲಿಕೇರಿ, ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದವರಿಗೆ ಸನ್ಮಾನ, ಗ್ರಾಮದ ಗುರು ಮೆಲೋಡೀಸ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.
ಜಾತ್ರಾ ಮಹೋತ್ಸವದಲ್ಲಿ ಶಿರೋಳದ ಕಲ್ಮೇಶ್ವರ, ದುರ್ಗಾದೇವಿ, ಶಾಂಭವಿ, ಬಸವೇಶ್ವರ, ಬೀರದೇವರ, ಜ್ಯೋತಿಬಾ ಫುಲೆ ಯುವಕ ಮಂಡಳಗಳಿಂದ ನಂದಿಕೋಲು, ವಚನ ಸಂಗೀತ, ಕರಡಿ ಮಜಲು, ಡೊಳ್ಳು, ಹಲಗಿ ಸೇವೆ ನಡೆಯಲಿದೆ.