

ನರಗುಂದ/ಶಿರೋಳ: ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರಸ್ವಾಮಿ ಗವಿಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರದಿಂದ ಪ್ರಾರಂಭಗೊಂಡಿದ್ದು, ಅ.6ರ ವರೆಗೆ ಜರುಗಲಿವೆ ಎಂದು ಗವಿಮಠದ ಅಭಿನವ ಶ್ರೀಯಚ್ಚರ ಮಹಾಸ್ವಾಮಿಗಳು ತಿಳಿಸಿದರು.
ಸೋಮವಾರ ಹಮ್ಮಿಕೊಂಡಿದ್ದ ಜಾತ್ರಾ ಸಮಿತಿ ಸದಸ್ಯರು, ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗವಿಮಠದ ಆವರಣದಲ್ಲಿ ಅ.1ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ. ಪ್ರಭಾಕರ ಉಳ್ಳಾಗಡ್ಡಿ, ಮಹಾಬಳೇಶ್ವರ ಕೊಡಬಳಿ ಪ್ರವಚನ ನೀಡುವರು. ಅ.2ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಸಂಜೆ ರಥೋತ್ಸವ ಹಾಗೂ ಬನ್ನಿ ಮುಡಿಯುವುದು. 3 ರಂದು ರೈತರು ಮತ್ತು ಸೈನಿಕರ ಹಿತ ಚಿಂತನೆ ಸಭೆ ಏರ್ಪಡಿಸಿದೆ. 4 ರಂದು ಭಕ್ತರ ಹಿತಚಿಂತನೆ ಸಭೆ. 5 ರಂದು ಜೀವನ ದರ್ಶನ. 6 ರಂದು ಮಾಸಿಕ ಶಿವಾನುಭವ ಗೋಷ್ಠಿ, ಉಚಿತ ಆರೋಗ್ಯ ಶಿಬಿರ, ನೇತ್ರ ತಪಾಸಣೆ, ತುಲಾಭಾರ, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ ಹಾಗೂ ವಿಶೇಷ ಸಂಗೀತ ರಸಮಂಜರಿ ಬುಗಲ್ ಬಂದಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿರೋಳ ತೋಂಟದಾರ್ಯ ಶಾಖಾಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು, ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮಿಗಳು, ಕೊಪ್ಪಳದ ಬಸವಾರೂಢ ಸ್ವಾಮಿಗಳು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಉಳುವೇಂದ್ರ ಶ್ರೀಗಳು ವಹಿಸುವರು. ಶ್ರೇಷ್ಠ ಕೃಷಿಕ ರೈತ ವಿಜಯ ವಸ್ತ್ರದ, ಪ್ರಸನ್ನ ದೀಕ್ಷಿತ್, ತೊಗಲು ಗೊಂಬೆ ಹಿರಿಯ ಕಲಾವಿದೆ, ಪದ್ಮಶ್ರೀ ಭೀಮವ್ವ ಶಿಳ್ಳಿಕ್ಯಾತರ ಹಾಗೂ ಮಹಾರಾಷ್ಟ್ರದ ಪೋಪಟರಾವ್ ಪವಾರ, ಜನಪದ ವಿದ್ವಾಂಸ ಡಾ.ಶಂಭು ಬಳಿಗಾರ ಇತರರು ಪಾಲ್ಗೊಳ್ಳುವರು ಎಂದರು. ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಶಿಕ್ಷಕ ವಿನಾಯಕ ಶಾಲ್ದಾರ ಮಾತನಾಡಿದರು.
ಎಸ್.ವೈ. ಮುಲ್ಕಿಪಾಟೀಲ, ಶಂಕ್ರಪ್ಪ ಲ. ಕಾಡಪ್ಪನವರ, ಹನುಮಂತ ತಿರಕನಗೌಡ್ರ, ಶೇಖರಣ್ಣ ಕಟಗೇರಿ, ಶ್ರೀಕಾಂತ ಉಳ್ಳಾಗಡ್ಡಿ, ಬಾಪುಗೌಡ ತಿಮ್ಮನಗೌಡ್ರ, ಜಂಬಯ್ಯ ಅಂಕಲಿಮಠ, ಮುದುವೀರಪ್ಪ ಕರಕೀಕಟ್ಟಿ, ರವಿ ದೊಡಮನಿ, ಶ್ರೀಕಾಂತ ದೊಡಮನಿ, ಜಂಬಣ್ಣ ದಿಂಡಿ, ಶಿವಲಿಂಗಪ್ಪ ಹುಣಸೀಮರದ, ಸಂಗಣ್ಣ ಕಿತ್ತಲಿ, ಮುತ್ತಣ್ಣ ಸುಳ್ಳದ, ಲೋಕಪ್ಪ ಕರಕೀಕಟ್ಟಿ, ಮಂಜುನಾಥ ಕವಡಿಮಟ್ಟಿ, ಕಳಕಪ್ಪ ಕವಡಿಮಟ್ಟಿ, ಮಲ್ಲಪ್ಪ ಪೂಜಾರ, ಕಲ್ಮೇಶ ಬಾಗೇವಾಡಿ, ದೇವರಾಜ ಜಂಗವಾಡ, ಇತರರಿದ್ದರು.