

ಶಿರೋಳ: ನವಿಲು ತೀರ್ಥ ಡ್ಯಾಮ್ಂದ ಮಲಪ್ರಭಾ ನದಿಗೆ ಒಳ ಹರಿವು ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಬೆಣ್ಣಿ ಹಳ್ಳ ತುಂಬಿ ಹರಿಯುತ್ತಿದೆ. ನರಗುಂದ ತಾಲೂಕಿನ ಶಿರೋಳ, ಕೊಣ್ಣೂರು, ಕಲ್ಲಾಪೂರ, ವಾಸನ, ಬೂದಿಹಾಳ, ಲಕಮಾಪೂರ, ಬೆಳ್ಳೇರಿ, ಗುಳಗಂದಿ, ಮೆಣಸಗಿ ಹಾಗೂ ಕಪ್ಪಲಿ ಗ್ರಾಮಗಳ ಜಮೀನುಗಳು ಇದರಿಂದ ತೊಂದರೆಗೆ ಸಿಲುಕಿವೆ. ಈ ಎಲ್ಲ ಗ್ರಾಮಗಳ ರೈತರು ಬೆಳೆದಿದ್ದ ಸಾವಿರಾರು ಎಕರೆಯಲ್ಲಿನ ಗೋವಿನ ಜೋಳ, ಹೆಸರು, ಹತ್ತಿ, ಸೂರ್ಯಕಾಂತಿ, ಕಬ್ಬು, ಬಾಳೆ, ಪೇರಲ ತೋಟಗಳಿಗೆ ನೀರು ನುಗ್ಗಿದೆ. ನದಿದಂಡೆಯ ಹತ್ತಿರದ ಹೊಲಗಳಲ್ಲಿ ನಿರ್ವಿುಸಿದ್ದ ಕೃಷಿ ಹೊಂಡಗಳು ಸಂಪೂರ್ಣ ನೆಲಸಮಗೊಂಡಿವೆ.