

ನಾಪೋಕ್ಲು: ಮೂರ್ನಾಡಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಿರಿನ್ ಸೀತಮ್ಮ ಹಾಗೂ ಪ್ರಾಥಮಿಕ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಚಿರಾಗ್ ಚಂಗಪ್ಪ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಬಿ.ಯು.ಕುಶಾಲಪ್ಪ, ಕೆ.ಪಿ.ನಿಧಿ, ವೈ.ಎಸ್.ಸ್ಪಂದನಾ, ಎಂ.ಎ.ಶೀರ್ಷ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಚೆಸ್ ಪಂದ್ಯಾವಳಿಗೆ ಕೆ.ಆರ್.ಬಿನೀಸ್ ಹಾಗೂ ಎ.ಎನ್.ಬೃಂದಾ ಆಯ್ಕೆಯಾಗಿರುತ್ತಾರೆ. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಇಬ್ಬರೂ ವಿದ್ಯಾರ್ಥಿಗಳು ಪೇರೂರು ಗ್ರಾಮದ ಅಪ್ಪಚೀರ ನಂದಾ ಕುಮಾರ ದಂಪತಿ ಮಕ್ಕಳಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕಿ ಮಣವಟ್ಟೀರ ವರ್ಷಚಿಣ್ಣಪ್ಪ ಮಾರ್ಗದರ್ಶನ ನೀಡಿದ್ದರು.