

ಕಂಪ್ಲಿ: ಗುರು ಪೂರ್ಣಿಮೆ ನಿಮಿತ್ತ ಇಲ್ಲಿನ ಸತ್ಯನಾರಾಯಣಪೇಟೆಯ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಯಿಬಾಬಾಗೆ ಫಲಪುಷ್ಪ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಾಕಡಾರತಿ, ಪುಷ್ಪಾರ್ಚನೆ, ಸಂಧ್ಯಾರತಿ, ವಿಶೇಷ ಪಲ್ಲಕ್ಕಿ ಸೇವೆ, ಶೇಷಾರತಿ, ಅನ್ನಸಂತರ್ಪಣೆ ಸೇರಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ: ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ
ಕಂಪ್ಲಿಯ ಶ್ರೀ ನಾಟ್ಯಲಕ್ಷ್ಮೀ ಕಲಾಟ್ರಸ್ಟ್‌ನ ವಿದ್ಯಾರ್ಥಿಗಳು ನಾಟ್ಯಗುರು ಜಿಲಾನಿಭಾಷರ ನೇತೃತ್ವದಲ್ಲಿ ಭರತನಾಟ್ಯ ಸೇವೆ ಸಲ್ಲಿಸಿದರು. ಅರ್ಚಕ ರಾಜೇಂದ್ರ ಜೋಷಿ, ಸಾಯಿಬಾಬಾ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ರಾಮಗೋಪಾಲರೆಡ್ಡಿ, ಪದಾಧಿಕಾರಿಗಳಾದ ಬಟಾರಿ ದೇವೇಂದ್ರಪ್ಪ, ಪಿ.ಶ್ರೀನಿವಾಸುಲು, ಗಿರಿನಾಥ ಶ್ರೇಷ್ಠಿ, ಜಿ.ವೆಂಕಟೇಶ್ವರರಾವು, ಕೊಡಿದಲ ವೆಂಕಟೇಶ, ವಿಶ್ವನಾಥ ಇತರರಿದ್ದರು.
ಮಾರುತಿ ನಗರದ ಯೋಗಿ ನಾರೇಯಣ ಯತೀಂದ್ರರ ಭವನದಲ್ಲಿ ಯೋಗಿ ನಾರೇಯಣರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಬಲಿಜ ಸಮಾಜದ ಅಧ್ಯಕ್ಷರಾದ ಕವಿತಾಳ ಬಸವರಾಜ, ಶಾರದಾ ಲೋಕೇಶ, ಪದಾಧಿಕಾರಿಗಳಾದ ಇಂಗಳಗಿ ನಾರಾಯಣಪ್ಪ, ತಿರುಮಲ ದೇವರಾಯ, ಪಿ.ವೆಂಕೋಬಣ್ಣ, ಶೀನಪ್ಪ, ಗೋಪಾಲಪ್ಪ, ಸಂಜನಾ, ತಿಮ್ಮಪ್ಪ, ಪ್ರಕಾಶ ಇತರರಿದ್ದರು. ಕಾಲುವೆ ಬಳಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾ ಮಠದಲ್ಲಿ ಬೃಂದಾವನಕ್ಕೆ ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿತ್ತು.