ಸಭೆಯಲ್ಲೇ ಕುಸಿದು ಬಿದ್ದ ಆಹಾರ ಶಿರಸ್ತೇದಾರ್

16 skpp 2
Published on

ಸಕಲೇಶಪುರ: ತಹಸೀಲ್ದಾರ್ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದ ಆಹಾರ ಶಿರಸ್ತೇದಾರ್ ತಾಪಂ ಸಭೆಯಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ.

ಮೂರು ದಿನಗಳ ಹಿಂದೆ ಮಿನಿ ವಿಧಾನಸೌಧದ ತಹಸೀಲ್ದಾರ್ ಕೊಠಡಿಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದ ತಮ್ಮನ್ನು ಕಂದಾಯ ಇಲಾಖೆಯ ನೌಕರರ ಎದುರೇ ಅವಮಾನಿಸಿದ್ದ ತಹಸೀಲ್ದಾರ್ ಮಂಜುನಾಥ್ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಆಹಾರ ಶಿರಸ್ತೇದಾರ್ ಆನಂದಮೂರ್ತಿ ದೂರು ನೀಡಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ತಹಸೀಲ್ದಾರ್, ಆನಂದಮೂರ್ತಿ ಬಡ್ತಿಯನ್ನು ತಡೆಹಿಡಿಯುವ ಬಗ್ಗೆ ಮಾತನಾಡಿದ್ದಲ್ಲದೆ ಅವರ ಕಾರ್ಯವೈಖರಿ ಖಂಡಿಸಿ ನೋಟಿಸ್ ನೀಡಿದ್ದರು. ಈ ವಿಚಾರ ಸೋಮವಾರ 4 ಗಂಟೆಗೆ ಎಸಿ ಕಚೇರಿಯಲ್ಲಿ ವಿಚಾರಣೆ ನಡೆಯುವುದಿತ್ತು.

ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಆಹಾರ ಶಿರಸ್ತೇದಾರ್ ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ತ್ರೈಮಾಸಿಕ ಸಭೆಯಲ್ಲೇ ಕುಸಿದು ಬಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದರಾದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net