

ಶಿರಸಂಗಿ: ಗ್ರಾಮದಲ್ಲಿ ಶುಕ್ರವಾರ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತ್ಯುತ್ಸವ ವಿಜಂಭಣೆಯಿಂದ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಲಿಂಗರಾಜ ಭಾವಚಿತ್ರದ ಮೆರವಣಿಗೆ ನಡೆಯಿತು.
ಲಿಂಗರಾಜ ಪ್ರೌಢ ಶಾಲೆಯಲ್ಲಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಿಂಗರಾಜ ಸ್ಮಾರಕ ಶಿಣ ಸಮಿತಿ ಅಧ್ಯ ವಿ.ಎ. ಅದೃಶ್ಯಪ್ಪ ಮಾತನಾಡಿ, ಲಿಂಗರಾಜರ ಶಿಣ ಪ್ರೀತಿಗೆ ಅವರು ಮಾಡಿದ ತ್ಯಾಗವೇ ಸಾಕ್ಷ$್ಯ. ಅಂತಹ ದಾನಿಗಳು ಸಮಾಜದಲ್ಲಿ ಸಿಗುವುದು ವಿರಳ. ಶಿಣದ ಬಗ್ಗೆ ಅವರಲ್ಲಿದ್ದ ದೂರದೃಷ್ಟಿ ನಮಗೆಲ್ಲ ದಾರಿದೀಪ. ಕೆಎಲ್ಇ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಲಿಂಗರಾಜರ ಪಾತ್ರ ಪ್ರಮುಖ ಎಂದರು.
ಊರಿನ ಎಲ್ಲ ಶಾಲೆಗಳ ಶಿಕರು, ವಿದ್ಯಾರ್ಥಿಗಳು ಸುತ್ತಮುಲಿನ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆ ನಿರ್ದೇಶಕರಾದ ಶಿವಾಜಿ ಶಿಂಧೆ, ಎಂ.ಎ. ತೋರಣಗಟ್ಟಿ, ಐ.ಎ್. ಈರಣಗೌಡ್ರ, ಮುಖಂಡರಾದ ಲಿಂಗರಾಜ ದೇಸಾಯಿ ಆಸ್ತಿ ಸಂರಣಾ ಸಮಿತಿ ಅಧ್ಯ ಬಸವಪ್ರಭು ಅಣ್ಣಿಗೇರಿ, ಕೆ.ಐ. ಕಲಾಲ, ಶಿವಾನಂದ ತೊರಗಲ, ಎಸ್.ಎಂ. ಪಾಟೀಲ, ಬಿ.ಪಿ. ಗಾಣಿಗೇರ, ಲಿಂಗರಾಜ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಕೆ. ಗುರ್ಲಕಟ್ಟಿ ಹಾಗೂ ಸಹ ಶಿಕರು ಉಪಸ್ಥಿತರಿದ್ದರು.