

ಧಾರವಾಡ: ತ್ಯಾಗವೀರ ಶಿರಸಂಗಿ ಲಿಂಗರಾಜರು ಕೇವಲ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಆಸ್ತಿಯನ್ನು ಮೀಸಲಿಡದೆ ಕೃಷಿಗೂ ಒತ್ತು ನೀಡಿದರು. ರೈತರಿಗಾಗಿ ಕೃಷಿ ಶಾಲೆ ಆರಂಭಿಸಿದರು. ಬರಗಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆರೆಗಳ ನಿರ್ಮಾಣ ಕೈಗೊಂಡರು. ದಾನವೀರ ಲಿಂಗರಾಜರು ಸದಾಕಾಲ ಸ್ಮರಣೀಯರು ಎಂದು ಕರ್ನಾಟಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಡಾ. ಶರಣಪ್ಪ ಮುಷ್ಠಿಗೇರಿ ಹೇಳಿದರು.
ನಗರದ ಟೌನ್ಹಾಲ್ನಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ಅಂಗಸAಸ್ಥೆಗಳು ಹಾಗೂ ಕೆ.ಎಲ್.ಇ. ಸೊಸೈಟಿಯ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಹಾದಾನಿ ತ್ಯಾಗವೀರ ಶಿರಸಂಗಿ ಲಿಂಗರಾಜರ ೧೬೩ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕಾಗಿ ಭವಾನಿ ಕೆರೆ ನಿರ್ಮಾಣಕ್ಕಾಗಿ ಸುಮಾರು ೧೫೦ ಎಕರೆ ಭೂಮಿ ದಾನ ನೀಡಿದರು. ಇಂದು ಸಣ್ಣ ಜಾಗಕ್ಕಾಗಿ ಕೊಲೆಗಳಾಗುವ ಪ್ರಸಂಗ ಬಂದಿದೆ. ಪತ್ನಿಯ ಹೆಸರು ಭಾಗೀರಥಿ ಆಗಿದ್ದರಿಂದ ಹಲವಾರು ನೀರಾವರಿ ಯೋಜನೆಗಳಿಗೆ ವಿಪುಲ ಹಣ ಮೀಸಲಿಟ್ಟಿದ್ದರು. ಆರೋಗ್ಯವನ್ನೂ ಲಕ್ಷಿಸದೆ ಸಮಾಜದ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದರು ಎಂದರು.
ಸAಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾAತ ಮಟ್ಟಿ ಮಾತನಾಡಿ, ಲಿಂಗರಾಜ ಟ್ರಸ್ಟ್ನಿಂದ ಬಡ ಮಕ್ಕಳಿಗೆ ಶಿಷ್ಯವೇತನ ಸಿಗಬೇಕು. ಅದಕ್ಕಾಗಿ ಬೆಳಗಾವಿ ಜಿಲ್ಲಾಽಕಾರಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷ ವಿ.ಬಿ. ಯಳಲ್ಲಿ ಮಾತನಾಡಿ, ಲಿಂಗರಾಜರ ಕೊಡುಗೆಯಿಂದ ಇಂದಿನ ವಿದ್ಯಾ ಸಂಸ್ಥೆಗಳಾದ ಎಲ್ಇಎ, ಕೆ.ಎಲ್.ಇ. ವಿದ್ಯಾರಂಗದಲ್ಲಿ ಅಭೂತ ಕೊಡುಗೆ ನೀಡುತ್ತಿವೆ. ಲಿಂಗರಾಜರು ಮರೆಯದ ಮಾಣಿಕ್ಯದಂತೆ ಸಮಸ್ತ ಆಸ್ತಿಯನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟರು. ಅವರ ಕೊಡುಗೆ ಇಂದಿನ ಪ್ರತಿಯೊಬ್ಬ ಪ್ರಜೆಗೂ ಮಾದರಿ ಎಂದರು.
ಆರ್.ಯು. ಬೆಳ್ಳಕ್ಕಿ, ರವಿ ಕೂಡವಕ್ಕಲಿಗರ, ಎನ್.ಸಿ.ಪಾಟೀಲ, ಡಾ. ಎಸ್.ಆರ್. ಗುಂಜಾಳ, ಇತರರಿದ್ದರು. ಶಿವಲಿಂಗ ನೀಲಗುಂದ ಸ್ವಾಗತಿಸಿದರು. ದೀಪಾ ಮುಂಡರಗಿ ನಿರ್ವಹಿಸಿದರು. ಆರ್.ಎಲ್.ಎಸ್. ಪ್ರಾಚಾರ್ಯ ಸಿ.ವಿ. ಕಣಬರ್ಗಿ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಟಾನ್ಹಾಲ್ನಿಂದ ಕೆಸಿಸಿ ಬ್ಯಾಂಕ್ ವೃತ್ತದವರೆಗೆ ತ್ಯಾಗವೀರ ಶಿರಸಂಗಿ ಲಿಂಗರಾಜರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.