14 ಕಳ್ಳತನ ಪ್ರಕರಣ ಬೇಧಿಸಿದ ಶಿರಾಳಕೊಪ್ಪ ಪೊಲೀಸರು

25 smg 14
Published on

ಶಿವಮೊಗ್ಗ: ಸೊರಬ ತಾಲೂಕಿನ ತೊಗರ್ಸಿ ಗ್ರಾಮದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು, 14 ಮನೆಗಳ್ಳತನ ಪ್ರಕರಣ ಬೇಧಿಸಿ 12.77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಶಿರಾಳಕೊಪ್ಪ ಟೌನ್‌ನ ದಾಸರ ಕಾಲನಿಯ ಚಿನ್ನಸ್ವಾಮಿ (50) ಮತ್ತು ಮಹಾದೇವಯ್ಯ ಬಡಾವಣೆಯ ಬಿ.ಆರ್.ಕುಮಾರ್ (42) ಬಂಧಿತರು. ಇವರು ತೊಗರ್ಸಿ ಗ್ರಾಮದ ತುಂಗಾಭದ್ರಮ್ಮ ಅವರ ಮನೆಗೆ ನುಗ್ಗಿ 38 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳು ಶಿರಾಳಕೊಪ್ಪ ಠಾಣೆ ವ್ಯಾಪ್ತಿಯಲ್ಲಿ 12 ಮತ್ತು ಸೊರಬ ಠಾಣಾ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬಂಧಿತರಿಂದ 504 ಗ್ರಾಂ ಬಂಗಾರದ ಆಭರಣ, 1.130 ಕೆಜಿ ಬೆಳ್ಳಿ ಆಭರಣ, ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net