ಅಕ್ರಮವಾಗಿ ಜಿಂಕೆ ಸಾಕುತ್ತಿದ್ದ ಆರೋಪ, ಇಬ್ಬರ ಬಂಧನ

3 smg 11
Published on

ಶಿವಮೊಗ್ಗ: ಅಕ್ರಮವಾಗಿ ಜಿಂಕೆ ಸಾಕುತ್ತಿದ್ದ ಆರೋಪದ ಮೇಲೆ ಶಿರಾಳಕೊಪ್ಪ ಪಟ್ಟಣ ಕಾಂಗ್ರೆಸ್ ಮುಖಂಡ ಸೈಯದ್ ಬಿಲಾಲ್ ಮೇಲೆ ಕೇಸ್ ದಾಖಲಾಗಿದೆ. ಜಿಂಕೆಯನ್ನು ರಕ್ಷಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸಾಮೀಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಜಬೀವುಲ್ಲಾ ಹಾಗೂ ದಸ್ತಗಿರ್ ಬಂಧಿತರು. ಸೈಯದ್ ಬಿಲಾಲ್ ಸಾಮೀಲ್‌ನಲ್ಲಿ ಅಕ್ರಮವಾಗಿ ಜಿಂಕೆ ಸಾಕುತ್ತಿದ್ದರು. ಈತ ಶಿಕಾರಿಪುರ ರಸ್ತೆಯ ರೆಹಮಾನಿಯಾ ಸಾಮಿಲ್‌ನಲ್ಲಿ ಕಳೆದ ಕೆಲವು ತಿಂಗಳಿನಿಂದ ಅಕ್ರಮವಾಗಿ ಜಿಂಕೆ ಸಾಕುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದು ಸಾಮಿಲ್‌ನಲ್ಲಿದ್ದ ಜಿಂಕೆ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಸೈಯದ್ ಬಿಲಾಲ್ ತಲೆಮರೆಸಿಕೊಂಡಿದ್ದು ವನ್ಯಜೀವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net