ಹುಬ್ಬಳ್ಳಿಗೆ ಶಿಫ್ಟ್ ಆದ ಶಿರಹಟ್ಟಿ ರಾಜಕಾರಣ, ಆಕಾಂಕ್ಷಿಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಜೆ.ಪಿ. ನಡ್ಡಾ ನೇತೃತ್ವದಲ್ಲಿ ಅಭ್ಯರ್ಥಿ ಅಂತಿಮ... ಪ್ರಕರಣ ಕುರಿತು ಆಯುಕ್ತಾಲಯಕ್ಕೆ ಮಾಹಿತಿ ನೀಡಿದ ಜಿಲ್ಲಾಡಳಿತ

Shirahatti
Published on

ವಿಜಯವಾಣಿ ವಿಶೇಷ ಗದಗ
ನಾಮ ಪತ್ರ ಸಲ್ಲಿಸಲು ಗುರುವಾರ ಒಂದೇ ದಿನ ಬಾಕಿ ಇದ್ದು, ಶಿರಹಟ್ಟಿ ಮತ ಕ್ಷೇತ್ರದ ಬಿಜೆಪಿ ಟಿಕೆಟ್​ ಎಂಬ ಟಾಸ್​ ಕುರಿತು ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿದೆ. ಬಿಫಾರ್ಮ ಯಾರಿಗೆ ಎಂಬ ವಿಷಯ ಗೊಂದಲದ ಗೂಡಾಗಿದ್ದು, ಕ್ಷೇತ್ರದ ಬಿಜೆಪಿ ಬೆಂಬಲಿಗರು ಚಾತಕ ಪಯಂತೆ ಕಾಣುತ್ತಿದೆ. ಟಾಸ್​ ಮತ್ತೊಮ್ಮೆ ತೂರಲಾಗುತ್ತದೆಯೇ ಅಥವಾ ಈ ಮೊದಲು ತೂರಿದ್ದ ಟಾಸ್​ ನಂತೆಯೇ ಮ್ಯಾಚ್​ ಆಡಬೇಕೇ ಎಂಬ ನಿರ್ಣಯವನ್ನು ಹುಬ್ಬಳ್ಳಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತೀರ್ಮಾನಿಸಲಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಲವು ಬೆಳವಣಿಗೆಗಳ ನಡುವೆ ರಾಜೀನಾಮೆ ಅಂಗೀಕಾರಕ್ಕೆ ಪರ ವಿರೋಧದ ಪ್ರಭಾವ ಹೆಚ್ಚಾಗಿದೆ. ಚಂದ್ರು ಲಮಾಣಿ ಮತ್ತು ರಾಮಣ್ಣ ಲಮಾಣಿ ಬೆಂಗಳೂರಿನಲ್ಲಿಯೇ ಇನ್ನೂ ಠಿಕಾಣಿ ಹೂಡಿದ್ದಾರೆ. ಎರಡೂ ಬಣಗಳು ರಾಜ್ಯದ ಹಿರಿಯ ವಕೀಲರ ಅಭಿಪ್ರಾಯ ಪಡೆದು ಮುನ್ನಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೂ ಪರ ವಿರೋಧ ಬಣಗಳ ಪ್ರಮುಖರು ಪ್ರಭಾವ ಬೀರಿದ್ದು, ಕಾನೂನು ಅನ್ವಯ ನಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಮಂಗಳವಾರ ರಾತ್ರಿ ನಡೆಯುವ ಸಭೆಯಲ್ಲಿ ಶಿರಹಟ್ಟಿ ಕ್ಷೇತ್ರದ ಕುರಿತು ಅಂತಿಮ ನಿರ್ಧಾರ ಹೊರ ಬೀಳಲಿದೆ. ಜೆ.ಪಿ ನಡ್ಡಾ ಬೆಂಗಳೂರಿಗೆ ಆಗಮಿಸುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಅಭ್ಯರ್ಥಿ ಹಾಗೂ ಆಕಾಂಕ್ಷಿಗಳ ಹಲವು ಬೆಂಬಲಿಗರು ಹುಬ್ಬಳ್ಳಿಗೆ ಆಗಮಿಸಿ ತಮ್ಮದೇ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಆಯುಕ್ತಾಲಯಕ್ಕೆ ಪತ್ರ:
ಡಾ. ಚಂದ್ರು ಲಮಾಣಿ ರಾಜೀನಾಮೆ ಅಂಗೀಕಾರ ವಿಷಯ ರಾಜ್ಯಾದ್ಯಾಂತ ಸುದ್ದಿ ಆಗುತ್ತಿದ್ದಂತೆ ಬೆಂಗಳೂರು ಆರೋಗ್ಯ ಇಲಾಖೆ ಆಯುಕ್ತಾಲವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಏ.17ರಂದು ಆಯುಕ್ತಾಲಯಕ್ಕೆ ಪತ್ರ ಬರೆದಿರುವ ಜಿಲ್ಲಾಡಳಿತ, 2022ರಲ್ಲಿ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಶ್ರೀಶೈಲ ವೀರಪ್ಪ ರೋಣದ ಎಂಬುವರು ಡಾ. ಚಂದ್ರು ಲಮಾಣಿ ಮೇಲೆ ದೂರು ಸಲ್ಲಿಸಿರುವ ಉಲ್ಲೇಖವನ್ನು ಪತ್ರಸ್ತಾಪಿಸಿ ಆಯುಕ್ತಾಲಯಕ್ಕೆ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಅಂಗೀಕಾರ ಆಗದೇ, ಸರ್ಕಾ ನೌಕರನಾಗಿ ಇದ್ದುಕೊಂಡು ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿ ಸರ್ಕಾರಿ ನೌಕರ ಶಿಸ್ತು ಕ್ರಮ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಜಿಲ್ಲಾಡಳಿತ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ
.

ಚಿಗುರಿದ ಕನಸು:
ಬಿಫಾರ್ಮ ಪಡೆಯುವ ಆತ್ಮ ವಿಶ್ವಾಸವನ್ನು ಚಂದ್ರು ಲಮಾಣಿ ಹೊಂದಿದಷ್ಟೇ, ವಿರೋಧಿ ಬಣದ ಆಕಾಂಗಳೂ ಹೊಂದಿದ್ದಾರೆ. ಆಕಾಂಕ್ಷಿಗಳಲ್ಲಿ ಒಬ್ಬರೂ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರೆ, ಮತ್ತೊಬ್ಬರು ಕ್ಷೇತ್ರದಲ್ಲೇ ಇದ್ದು ಬಿಜೆಪಿ ಹೈಕಮಾಂಡ್​ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಶಾಸಕ ರಾಮಣ್ಣ ಬೆಂಗಳೂರಿನಲ್ಲೇ ಇದ್ದು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ನಡುವೆ ಘೋಷಿತ ಅಭ್ಯರ್ಥಿ ಚಂದ್ರು ಲಮಾಣಿ ಕೂಡ ತಮ್ಮದೇ ತಂತ್ರ ಹೆಣೆದು ಕೊನೆ ಗಳಿಗೆಯಲ್ಲಿ ಟಾಸ್​ ನಂತೆಯೇ ಮ್ಯಾಚ್​ ಆರಂಭಿಸಬಹುದು. ಯಾವುದೇ ಬೆಳವಣಿಗೆಯನ್ನು ಅಲ್ಲಗಳೆಯುವಂತಿಲ್ಲ. ರಾಮಣ್ಣ ಲಮಾಣಿ, ಭೀಮಸಿಂಗ್​ ರಾಥೋಡ್​ ಮತ್ತು ಗುರುನಾಥ ದಾನಪ್ಪನ್ನವರ ಪ್ರಬಲ ಆಕಾಂಕ್ಷಿಗಳು.

ಪಕ್ಷಕ್ಕೆ ಮುಜುಗುರು:
ಶಿರಹಟ್ಟಿ ಅಭ್ಯಥಿರ್ಯ ಲೋಕಾಯುಕ್ತ ಪ್ರಕರಣದಿಂದ ರಾಜ್ಯ ಬಿಜೆಪಿ ಮುಖಂಡರಿಗೆ ತೀವ್ರ ಮುಜುಗುರು ಉಂಟಾಗಿದೆ. ರಾಜ್ಯ ಕೋರ್​ ಕಮಿಟಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಾರದೆ ಇರಿಸು ಮುರಿಸಾಗಿದೆ. ಅಭ್ಯಥಿರ್ಗಳ ಪೂರ್ವಾಪರ ವಿಚಾರ ತನಿಖೆ ಮಾಡಲು ಜಿಲ್ಲಾ ಕಮಿಟಿ ವಿಲವಾಯಿತೇ ಎಂಬ ಪ್ರಶ್ನೆ ಜಿಲ್ಲಾ ಸಮಿತಿಯಲ್ಲೇ ಉದ್ಭವವಾಗಿದೆ.

ಬಾಕ್ಸ್​:ಅಭ್ಯರ್ಥಿ ಆಯ್ಕೆಗೂ ಮೊದಲೇ ಅಭ್ಯರ್ಥಿ ಪ್ರಾಮಾಣಿಕವಾಗಿ ತಮ್ಮ ಮೇಲಿರುವ ಆರೋಪ ಮತ್ತು ಆರೋಪಗಳಿಲ್ಲದ ಕುರಿತು ಮುಚ್ಚಳಿಕೆ ಬರೆದುಕೊಡಬೇಕಿತ್ತು. ಇದು ಎಲ್ಲ ಅಭ್ಯಥಿರ್ಗಳಿಗೂ ಅನ್ವಹಿಸುತ್ತದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಸಿ.ಸಿ. ಪಾಟೀಲ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net